ಜಿಯೋಮಿಗೆ ಪ್ರಬಲ ಸ್ಪರ್ಧೆ ನೀಡಬಲ್ಲ ಕಾರ್ಬನ್ ಟೈಟಾನಿಯಂ ಜಂಬೋ

ದೇಶೀಯ ಮೊಬೈಲ್ ತಯಾರಿಕಾ ಕಂಪನಿ ಕಾರ್ಬನ್ ಮತ್ತೊಂದು ನೂತನ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದೆ. ಟೈಟಾನಿಯಂ ಸರಣಿಯ ಮುಂದುವರಿಕೆಯ ಭಾಗವಾಗಿ ‘ಕಾರ್ಬನ್ ಟೈಟಾನಿಯಂ ಜಂಬೋ’ ಹೆಸರಿನಲ್ಲಿ ಹೊಸ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದೆ. ಇದರ ಬೆಲೆ ರೂ.7,490 ಆಗಿದ್ದು, ಮಾರುಕಟ್ಟೆ ಆಪರೇಟಿಂಗ್ ಬೆಲೆಯಡಿ ರೂ.6,490 ಕ್ಕೆ ನೀಡುವುದಾಗಿ ಕಾರ್ಬನ್ ಪ್ರಕಟಿಸಿದೆ.

ಸ್ಮಾರ್ಟ್ ಫೋನ್ ನೊಂದಿಗೆ ಪ್ಯಾನೆಲ್ ಕವರ್ ಅನ್ನು ಉಚಿತವಾಗಿ ನೀಡಲಾಗುತ್ತಿದೆ. 4000 ಎಂಎಹೆಚ್ ಬ್ಯಾಟರಿ ಸಾಮರ್ಥ್ಯ ಹೊಂದಿರುವ ಈ ಫೋನ್ ಸ್ಟ್ಯಾಂಡ್ ಬೈ ಮೋಡ್ ನಲ್ಲಿ 400 ಗಂಟೆಗಳ ಟಾಕ್ ಟೈಮ್, 16 ಗಂಟೆಗಳ ಕಾಲ ಬ್ಯಾಟರಿ ಕೆಲಸ ಮಾಡುತ್ತದೆ ಎಂದು ಕಂಪನಿ ಹೇಳಿದೆ. ಇದರ ಸ್ಪೀಡ್, ಕ್ಯಾಮೆರಾ ಮತ್ತು ಬೆಲೆಗೆ ಹೋಲಿಸಿದರೆ ಜಿಯೋಮಿ ರೆಡ್ಮಿ 4 ಮೊಬೈಲ್ ಗೆ ಪ್ರಬಲ ಸ್ಪರ್ಧೆ ನೀಡುತ್ತದೆ ಎಂದು ತಜ್ಞರು ಭಾವಿಸುತ್ತಿದ್ದಾರೆ.

ಟೈಟಾನಿಯಮ್ ಜಂಬೊ ವೈಶಿಷ್ಟ್ಯಗಳು
5 ಇಂಚಿನ ಸ್ಕ್ರೀನ್
1.3 GHz ಪ್ರೊಸೆಸರ್
ಆಂಡ್ರಾಯ್ಡ್ 7.0 ನೌಗಟ್
2 ಜಿಬಿ RAM
16 ಜಿಬಿ ಇಂಟರ್ನಲ್ ಮೆಮೋರಿ
13 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮರಾ
8 ಮೆಗಾಪಿಕ್ಸೆಲ್ ಸೆಲ್ಫೀ ಕ್ಯಾಮರಾ
4000 mAh ಬ್ಯಾಟರಿ

Get Latest updates on WhatsApp. Send ‘Add Me’ to 8550851559