ಕನ್ನಡ ಸಂಘಟನೆಗಳ ವೈಯುಕ್ತಿಕ ಪ್ರತಿಷ್ಟೆಗಾಗಿ ಬಂದ್ ಬಲಿ – News Mirchi

ಕನ್ನಡ ಸಂಘಟನೆಗಳ ವೈಯುಕ್ತಿಕ ಪ್ರತಿಷ್ಟೆಗಾಗಿ ಬಂದ್ ಬಲಿ

ಬಯಲುಸೀಮೆಗೆ ಶಾಶ್ವತ ಕುಡಿಯುವ ನೀರು, ಮಹದಾಯಿ ಕಳಸಾ ಬಂಡೂರಿ ಯೋಜನೆ, ರೈತರ ಸಾಲ ಮನ್ನಾ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ವಾಟಾಳ್ ನಾಗರಾಜ್ ಕರೆ ನೀಡಿರುವ ಕರ್ನಾಟಕ ಬಂದ್ ಗೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತರಾಗಿ ಮುಚ್ಚಲಾಗಿದ್ದು, ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಕೋಲಾರದಲ್ಲಿ ಟೈರ್ ಗಳಿಗೆ ಬೆಂಕಿ ಹಚ್ಚಿ, ಬಸ್ ಗಳ ಮೇಲೆ ಕಲ್ಲು ತೂರಾಟ ನಡೆದಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು 8 ಜನರನ್ನು ಬಂಧಿಸಿದ್ದಾರೆ. ಉಳಿದೆಡೆ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಆದರೆ ವಾಟಾಳ್ ಕರೆ ನೀಡಿರುವ ಬಂದ್ ಗೆ ಕೆಲವು ಸಂಘಟನೆಗಳು ವೈಯುಕ್ತಿಕ ಪ್ರತಿಷ್ಟೆಗಾಗಿ ಬೆಂಬಲ ನೀಡದಿರಲು ನಿರ್ಧರಿಸಿದ್ದಷ್ಟೇ ಅಲ್ಲದೆ ಬಂದ್ ಗೆ ವಿರೋಧ ವ್ಯಕ್ತಪಡಿಸಿವೆ. ಒಟ್ಟಿನಲ್ಲಿ ರೈತರ ಪರ ಹಮ್ಮಿಕೊಂಡಿರುವ ಬಂದ್ ವಿಷಯದಲ್ಲಿ ಸಂಘಟನೆಗಳಿಂದ ವೈಯುಕ್ತಿಕ ಪ್ರತಿಷ್ಠೆಗಾಗಿ ರೈತರ ಪರ ಹೋರಾಟವನ್ನು ಬಲಿ ಕೊಡಲಾಗಿದೆ.

ಬಂದ್ ವಿಫಲಗೊಳಿಸಲು ಪೊಲೀಸರು ವ್ಯವಸ್ಥಿತ ಪಿತೂರಿ ನಡೆಸಿದ್ದಾರೆ ಎಂದು ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ, ಬಂದ್ ವಿಫಲಗೊಳಿಸಲು ಪಿತೂರಿ ನಡೆಸಿದವರ ಹೆಸರುಗಳನ್ನು ಶೀಘ್ರದಲ್ಲಿ ಬಹಿರಂಗಗೊಳಿಸುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಹೇಳಿದ್ದಾರೆ.

Loading...