ಸಮಾಜವಾದಿ ಮುಖ್ಯಮಂತ್ರಿ ಹೀಗೆ ಮಾಡೋದೇ? – News Mirchi

ಸಮಾಜವಾದಿ ಮುಖ್ಯಮಂತ್ರಿ ಹೀಗೆ ಮಾಡೋದೇ?

ಮೈಸೂರು: ತಮ್ಮನ್ನು ತಾವು ಸಮಾಜವಾದಿ ಎಂದು ಕರೆದುಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಶನಿವಾರ ನಿಧನರಾದ ಹಿರಿಯ ನಟ ಚೇತನ್ ರಾಮರಾವ್ ಅವರ ಅಂತಿಮ ದರ್ಶನಕ್ಕೆ ಮೃತರ ನಿವಾಸಕ್ಕೆ ತೆರಳಿದ್ದ ಸಿದ್ದರಾಮಯ್ಯ, ತಮ್ಮ ಆಪ್ತ ಸಹಾಯಕನಿಂದ ಕಾಲಿಗೆ ಶೂ ಹಾಕಿಸಿಕೊಂಡಿದ್ದು ತೀವ್ರ ಟೀಕೆಗೆ ಗುರಿಯಾಗಿದೆ.

ಮೃತರ ಅಂತಿಮ ದರ್ಶನ ಪಡೆದು ಮನೆಯಿಂದ ಹೊರಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಾಗಿಲ ಬಳಿ ಯಾರಿಗೋ ಕಾಯುತ್ತಿರುವಂತೆ ಇತ್ತು. ಅಷ್ಟರಲ್ಲಿ ಸಿಎಂ ಬಳಿ ಬಂದ ಆಪ್ತ ಸಹಾಯಕ ಪಿ.ಎ ಕುಮಾರ್ ಸಿದ್ದರಾಮಯ್ಯನವರಿಗೆ ಶೂ ತೊಡಿಸಿದರು.

ಈ ಘಟನೆ ಕುರಿತು ಸಿಎಂ ಮಾತ್ರ ಇದುವರೆಗೂ ಪ್ರತಿಕ್ರಿಯಿಸಿಲ್ಲ. ಸಮಾಜವಾದಿ ಎಂದು ಕರೆಸಿಕೊಳ್ಳುವ ವ್ಯಕ್ತಿ ಹೀಗೆ ಮಾಡಿರುವುದರ ಕುರಿತು ಟೀಕೆಗಳು ವ್ಯಕ್ತವಾಗಿವೆ.

Loading...

Leave a Reply

Your email address will not be published.