ಡಿಪ್ಲೊಮಾ 2017 ಫಲಿತಾಂಶ ಪ್ರಕಟ – News Mirchi

ಡಿಪ್ಲೊಮಾ 2017 ಫಲಿತಾಂಶ ಪ್ರಕಟ

ಬೆಂಗಳೂರು: ಕರ್ನಾಟಕ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯವು 2017 ರ 2, 4 ಮತ್ತು 6 ನೇ ಸೆಮಿಸ್ಟರ್ ಡಿಪ್ಲೊಮಾ ಪರೀಕ್ಷಾ ಫಲಿತಾಂಶಗಳನ್ನು ಪ್ರಕಟಿಸಿದೆ. ವಿದ್ಯಾರ್ಥಿಗಳು www.btekarlinx.net ಮತ್ತು www.dte.kar.nic.in ವೆಬ್ಸೈಟ್ ಗಳಲ್ಲಿ ಫಲಿತಾಂಶವನ್ನು ನೋಡಬಹುದು. 2017 ರ ಏಪ್ರಿಲ್ ನಲ್ಲಿ ರಾಜ್ಯದ ವಿವಿದ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದಿದ್ದವು.

ಅಭ್ಯರ್ಥಿಗಳು ತಮ್ಮ ಫಲಿತಾಂಶದಲ್ಲಿ ಅನುಮಾನ ಹೊಂದಿದ್ದರೆ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು. ಈ ಪ್ರಕ್ರಿಯೆಗೆ ಸಂಬಂಧಿಸಿದಂತೆ ಶೀಘ್ರದಲ್ಲಿಯೇ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ ತನ್ನ ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟಿಸಲಿದೆ.

ಫಲಿತಾಂಶ ಪಡೆಯುವುದು ಹೇಗೆ?
1. ಮೊದಲು ಮೇಲೆ ನೀಡಿದ ವೆಬ್ಸೈಟ್ ಗೆ ಭೇಟಿ ನೀಡಿ
2. ಮುಖಪುಟದಲ್ಲಿ Karnataka Diploma May/June results 2016 ಲಿಂಕ್ ಗಾಗಿ ಹುಡುಕಿ, ಕ್ಲಿಕ್ ಮಾಡಿ
3. ಈಗೆ ತೆರೆದುಕೊಂಡ ಹೊಸ ಪುಟದಲ್ಲಿ ಇನ್’ಸ್ಟಿಟ್ಯೂಟ್ ಕೋಡ್, ನೋಂದಣಿ ಸಂಖ್ಯೆ ಮತ್ತು ಸೆಮಿಸ್ಟರ್ ಸಂಖ್ಯೆಯನ್ನು ನಮೂದಿಸಿ Submit ಮಾಡಿ.
4. ಈಗ ಪರದೆ ಮೇಲೆ ನಿಮ್ಮ ಫಲಿತಾಂಶ ಕಾಣುತ್ತದೆ.
5. ಫಲಿತಾಂಶ ನೋಡಿ, ಬೇಕಿದ್ದರೆ ಪ್ರಿಂಟ್ ತೆಗೆದುಕೊಳ್ಳಿ.

Loading...