ಜೂಮ್ ಬರಾಬರ್ : ಸರ್ಕಾರಿ ಕಾರ್ಯಕ್ರಮದಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ

ರಾಯಚೂರು: ಜಿಲ್ಲಾಡಳಿತ ಇಲ್ಲಿ ಟಿಪ್ಪು ಜಯಂತಿ ಆಚರಣೆ ನಡೆಸುತ್ತಿತ್ತು. ಸರ್ಕಾರಿ ಕಾರ್ಯಕ್ರಮದಲ್ಲಿ ಒಂದೆಡೆ ಟಿಪ್ಪು ಕುರಿತು ಉಪನ್ಯಾಸ ನಡೆಯುತ್ತಿದ್ದರೆ ಶಿಕ್ಷಣ ಸಚಿವ ತನ್ವೀರ್ ಸೇಠ್ ಮಾತ್ರ ಮೊಬೈಲ್ ನಲ್ಲಿ ವಯಸ್ಕರ ಚಿತ್ರ ವೀಕ್ಷಣೆಯಲ್ಲಿ ಮುಳುಗಿದ್ದರು. ತಮ್ಮ ಮೊಬೈಲ್ ನಲ್ಲಿ ಅಶ್ಲೀಲ ಚಿತ್ರಗಳನ್ನು ನೋಡುವುದರಲ್ಲಿ ಮೈಮರೆತಿದ್ದ ಅವರನ್ನು ಯಾರೋ ಎಚ್ಚರಿಸಿದರು.

ಸರ್ಕಾರಿ ಕಾರ್ಯಕ್ರಮದಲ್ಲಿ ಇದೇನು ಸಭ್ಯತೆ ಎಂದು ಶಿಕ್ಷಣ ಸಚಿವರ ವರ್ತನೆಗೆ ಎಲ್ಲೆಡೆ ಆಕ್ರೋಷ ವ್ಯಕ್ತವಾಗುತ್ತಿದ್ದರೆ, ಸಚಿವ ದಿನೇಶ್ ಗುಂಡೂರಾವ್ ಅವರು ಸೇಠ್ ಅವರ ಸಮರ್ಥನೆಗೆ ಮುಂದಾಗಿದ್ದಾರೆ. ಸೇಠ್ ಅವರು ಈ ಹಿಂದೆ ಬಿಜೆಪಿ ಸಚಿವರು ಮಾಡಿದಂತೆ ಜೂಮ್ ಮಾಡಿ ನೋಡಿಲ್ಲ ಎನ್ನುವ ಮೂಲಕ ಸಚಿವರು ಮಾಡಿದ್ದು ತಪ್ಪೇ ಅಲ್ಲ ಅಂದಿದ್ದಾರೆ.

ಈ ಹಿಂದೆ ಬಿಜೆಪಿ ಸಚಿವರು ಅಶ್ಲೀಲ ಚಿತ್ರ ವೀಕ್ಷಿಸಿದಾಗ ಅವರ ರಾಜೀನಾಮೆ ಪಡೆದಿದ್ದೆವು, ಈಗ ಸಿದ್ದರಾಮಯ್ಯನವರು ಭಂಡತನ ತೋರದೆ ತನ್ವೀರ್ ಸೇಠ್ ಅವರ ರಾಜೀನಾಮೆ ಪಡೆಯಲಿ ಎಂದು ಬಿಜೆಪಿ ನಾಯಕರಾದ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದ್ದಾರೆ.

ಹಿಂದೆ ಬಿಜೆಪಿ ಸಚಿವರು ಹೀಗೆ ಮಾಡಿದ್ದಾಗ ಅವರ ರಾಜೀನಾಮೆಗೆ ಒತ್ತಾಯಿಸಿ ಪಡೆದಿದ್ರಿ. ಈಗ ತನ್ವೀರ್ ಸೇಠ್ ರಾಜೀನಾಮೆ ಕೊಡುತ್ತಾರಾ ಎಂದು ಹೆಚ್.ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

Related News

Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache