ರಾಜ್ಯದಲ್ಲಿ 2020 ರ ವೇಳೆಗೆ 20,000 ಸ್ಟಾರ್ಟ್-ಅಪ್ ಗಳು: ಪ್ರಿಯಾಂಕ್ ಖರ್ಗೆ – News Mirchi

ರಾಜ್ಯದಲ್ಲಿ 2020 ರ ವೇಳೆಗೆ 20,000 ಸ್ಟಾರ್ಟ್-ಅಪ್ ಗಳು: ಪ್ರಿಯಾಂಕ್ ಖರ್ಗೆ

ಬೆಂಗಳೂರು: ಕೇಂದ್ರ ಸರ್ಕಾರದ ಸ್ಟಾರ್ಟ್-ಅಪ್ ನೀತಿಯನ್ನು ಅನುಷ್ಠಾನಗೊಳಿಸುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಮೂರು ದಿನಗಳ “ಪ್ರವಾಸಿ ಭಾರತೀಯ ದಿವಸ್” ನ ಅಂಗವಾಗಿ ಸ್ಟಾರ್ಟ್ ಅಪ್ ಗಳ ಕುರಿತ ಸೆಮಿನಾರ್ ನಲ್ಲಿ ಮಾತನಾಡುತ್ತಿದ್ದ ಅವರು, 2020 ರ ಅಂತ್ಯದ ವೇಳೆಗೆ 20,000 ಸ್ಟಾರ್ಟ್ ಅಪ್ ಗಳು ನೋಂದಣಿಯಾಗುವ ಭರವಸೆ ಇದೆ ಎಂದರು.

ಕರ್ನಾಟಕದಲ್ಲಿ ಸ್ಟಾರ್ಟ್ ಅಪ್ ಯೋಜ‌ನೆ ಅನುಷ್ಠಾನಕ್ಕೆ ತಂದ 10 ದಿನಗಳಲ್ಲೇ 120 ಸ್ಟಾರ್ಟ್ ಅಪ್ ಗಳು ನೋಂದಣಿಯಾಗಿವೆ ಎಂದರು. ಪರಿಸರ ಸರಂಕ್ಷಣೆಗಾಗಿ ಪರಿಸರ ಸ್ನೇಹಿ ಸ್ಟಾರ್ಟ್ ಅಪ್ ನೀತಿಯನ್ನು ರಾಜ್ಯ ಸರ್ಕಾರ ರೂಪಿಸಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಭಾರತದಲ್ಲಿ ಶೇ.25 ರಷ್ಟು ಬಂಡವಾಳ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಹರಿದು ಬರುತ್ತದೆ ಮತ್ತು ಮೂರನೇ ಒಂದರಷ್ಟು ಮಾಹಿತಿ ತಂತ್ರಜ್ಞಾನದ ಉತ್ಪಾದನೆ ಬೆಂಗಳೂರಿನಿಂದಲೇ ಬರುತ್ತದೆ. ಹಾಗಾಗಿ ಸರ್ಕಾರ ಬೆಂಗಳೂರಿನಲ್ಲಿ ಮೂಲಸೌಕರ್ಯಗಳನ್ನು ಮತ್ತಷ್ಟು ಸುಧಾರಿಸಲು ಪ್ರಯತ್ನಿಸುತ್ತಿದೆ ಎಂದರು.

Loading...

Leave a Reply

Your email address will not be published.