ಆ ತಪ್ಪುಗಳೇ ನಾವು ಸೋಲಲು ಕಾರಣವಾಯಿತು: ದಿನೇಶ್ ಕಾರ್ತಿಕ್

ಜಮೈಕಾ: ವೆಸ್ಟ್ ಇಂಡೀಸ್ ವಿರುದ್ಧ ಭಾನುವಾರ ಇಲ್ಲಿ ನಡೆದ ಏಕೈಕ ಟಿ20 ಪಂದ್ಯದಲ್ಲಿ ಭಾರತ ತಂಡ 9 ವಿಕೆಟ್ ಅಂತರಿದಂದ ಸೋತಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 190 ರನ್ ಗಳ ಉತ್ತಮ ಸ್ಕೋರ್ ಮಾಡಿದ್ದರೂ, ಅದನ್ನು ಕಾಪಾಡಿಕೊಳ್ಳಲು ವಿಫಲವಾಗಿ ಸೋಲನುಭವಿಸಿತು. ಹೀಗಾಗಿ ವಿಂಡೀಸ್ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಬೇಕು ಎಂದು ಬಯಸಿದ್ದ ಭಾರತ ತಂಡಕ್ಕೆ ಮಿಕ್ಕಿದ್ದು ನಿರಾಸೆಯೇ. ಆದರೆ ಕ್ಯಾಚ್ ಗಳನ್ನು ಕೈಚೆಲ್ಲಿದ್ದೇ ನಿನ್ನೆಯ ಸೋಲಿಗೆ ಕಾರಣ ಎಂದು ಭಾರತ ತಂಡದಲ್ಲಿ ಅತ್ಯಧಿಕ ರನ್ ಗಳಿಸಿದ್ದ ದಿನೇಶ್ ಕಾರ್ತಿಕ್ ಹೇಳಿದ್ದಾರೆ.

ಮುಖ್ಯವಾಗಿ ಲೂಯಿಸ್ ನೀಡಿದ್ದ ಕ್ಯಾಚ್ ಹಿಡಿಯುವಲ್ಲಿ ವಿಫಲವಾಗಿ ಬೆಲೆ ತೆತ್ತಿದ್ದೇವೆ. ವಿಂಡೀಸ್ ಇನ್ನಿಂಗ್ಸ್ ನ 6 ನೇ ಓವರ್ ಕೊನೆಯ ಎಸೆತದಲ್ಲಿ ಲೂಯಿಸ್ ನೀಡಿದ ಕ್ಯಾಚ್ ಅನ್ನು ಕೊಹ್ಲಿ, ಮೊಹಮದ್ ಶಮಿ ಅವರ ಸಮನ್ವಯತೆ ಕೊರತೆಯಿಂದ ಕೈಚೆಲ್ಲಿದ್ದು, ನಂತರ ನಾಲ್ಕು ಎಸೆತಗಳ ಅಂತರದಲ್ಲಿ ಆತನೇ ನೀಡಿದ ಮತ್ತೊಂದ ಕ್ಯಾಚ್ ಅನ್ನು ಹಿಡಿಯಲು ತಾನೇ ಬಿಟ್ಟಿದ್ದಾಗಿ ಕಾರ್ತಿಕ್ ಹೇಳಿದ್ದಾರೆ. ಸೂಕ್ತ ಸ್ಥಾನದಲ್ಲಿ ಇಲ್ಲದಿದ್ದರಿಂದಾಗಿಯೇ ಕ್ಯಾಚ್ ಹಿಡಿಯಲು ಸಾಧ್ಯವಾಗಲಿಲ್ಲ ಎಂದು ದಿನೇಶ್ ಸ್ಪಷ್ಟಪಡಿಸಿದ್ದಾರೆ.

ಎಟಿಎಂ ದರೋಡೆಗೆ ಉಗ್ರರಿಗೆ ನೆರವು ನೀಡಿದ್ದವನ ಬಂಧನ

ಈ ಎರಡೂ ಅವಕಾಶಗಳೇ ಪಂದ್ಯದ ಮೇಲೆ ಪ್ರಭಾವ ಬೀರಿದವು ಎಂದಿದ್ದಾರೆ. ಎರಡು ಜೀವದಾನ ಲಭಿಸಿದ ನಂತರ ಆಕ್ರಮಣಕಾರಿ ಆಟವಾದಿ ಲೂಯಿಸ್, ವೆಸ್ಟ್ ಇಂಡೀಸ್ ಸುಲಭವಾಗಿ ಗೆಲ್ಲುವಂತೆ ಮಾಡಿದ್ದರು. ಭಾರತ ನೀಡಿದ್ದ 191 ರನ್ ಗಳ ಗುರಿಯನ್ನು ಭೇದಿಸುವಲ್ಲಿ ಲೂಯಿಸ್ ಪ್ರಮುಖ ಪಾತ್ರವಹಿಸಿದರು. 62 ಎಸೆತಗಳಲ್ಲಿ 12 ಸಿಕ್ಸರ್, 6 ಫರ್ ಗಳೊಂದಿಗೆ ಅಜೇನಾಗಿ ನಿಂತರು.