ಕೋರ್ಟ್ ಸಲಹೆ ನಿರಾಕರಿಸಿದ ಕಾರ್ತಿಕ್ ಗೌಡ – News Mirchi

ಕೋರ್ಟ್ ಸಲಹೆ ನಿರಾಕರಿಸಿದ ಕಾರ್ತಿಕ್ ಗೌಡ

ಕೇಂದ್ರ ಸಚಿವ ಸದಾನಂದಗೌಡರ ಪುತ್ರ ಕಾರ್ತಿಕ್ ಗೌಡ ಮತ್ತು ನಟಿ ಮೈತ್ರಿಯಾ ಗೌಡ ಅವರ ಪ್ರಕರಣ ಸಂಬಂಧ ಹೈಕೋರ್ಟ್ ನೀಡಿದ್ದ ಸಲಹೆಯನ್ನು ಕಾರ್ತಿಕ್ ಗೌಡ ನಿರಾಕರಿಸಿದ್ದಾರೆ.

ಪ್ರಕರಣವನ್ನು ನ್ಯಾಯಾಲಯದ ಹೊರಗೆ ಮಧ್ಯಸ್ಥಿಕೆ ಮೂಲಕ ಪ್ರಕರಣ ಬಗೆಹರಿಸಿಕೊಳ್ಳಿ ಎಂದು ಪ್ರಕರಣ ರದ್ದು ಕೋರಿ ಕಾರ್ತಿಕ್ ಗೌಡ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರಾದ ಆನಂದ್ ಬೈರಾರೆಡ್ಡಿ ಸಲಹೆ ನೀಡಿದ್ದರು.

ಆದರೆ ನ್ಯಾಯಾಲಯದ ಹೊರಗೆ ಪ್ರಕರಣ ಇತ್ಯರ್ಥಗೊಳಿಸಲು ನಮಗೆ ಆಸಕ್ತಿ ಇಲ್ಲ, ನ್ಯಾಯಾಲಯದಲ್ಲಿಯೇ ವಾದ ಮಂಡಿಸಿ ನ್ಯಾಯ ಬಯಸುತ್ತೇವೆ ಎಂದು ಕಾರ್ತಿಕ್ ಪರ ವಕೀಲರು ಏಕಸದಸ್ಯ ಪೀಠದ ಮುಂದೆ ಹೇಳಿದ್ದಾರೆ .

ಮದುವೆಯಾಗುವುದಾಗಿ ನಂಬಿಸಿ ಕಾರ್ತಿಕ್ ಗೌಡ ವಂಚಿಸಿದ್ದಾರೆ ಎಂದು ನಟಿ ಮೈತ್ರಿಯಾ ದೂರು ನೀಡಿದ್ದರು. ಆದರೆ ಈ ದೂರು ರದ್ದು ಮಾಡುವಂತೆ ಕೋರಿ ಕಾರ್ತಿಕ್ ಕೊರ್ಟ್ ಮೊರೆ ಹೋಗಿದ್ದರು.

Loading...

Leave a Reply

Your email address will not be published.