ಕರುಣ್ ದಿ ಗ್ರೇಟ್…

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಗೂ ಸಾಧಿಸಲಾರದ್ದನ್ನು ಹಾಗೂ ಇದುವರೆಗೂ ಭಾರತದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕೇವಲ ಒಬ್ಬರು ಮಾತ್ರ ಸಾಧಿಸಿದ್ದನ್ನು ಇದೀಗ ಕರ್ನಾಟಕದ ಆಟಗಾರ ಕರುಣ್ ನಾಯರ್ ಸಾಧಿಸಿ ತೋರಿಸಿದ್ದಾರೆ.

ಆಡುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿಯೇ ಈ ಹಿರಿಮೆಗೆ ಕರುಣ್ ಪಾತ್ರರಾಗಿರುವುದು ವಿಶೇಷ. ಅಷ್ಟೇ ಅಲ್ಲ ತಮ್ಮ ಮೊದಲ ಸೆಂಚುರಿಯನ್ನೇ ತ್ರಿಶಕವಾಗಿ ಪರಿವರ್ತಿಸಿಕೊಂಡ ಮೊದಲ ಭಾರತೀಯ ಆಟಗಾರ ಕರುಣ್.

ಈ ಸರಣಿಯಲ್ಲಿ ಮೊದಲು ಆತ ಮಾಡಿದ್ದ ಸ್ಕೋರ್ 4, 13 ರನ್ ಗಳು ಮಾತ್ರ. ಇಂತಹ ಸಂದರ್ಭದಲ್ಲಿ ತ್ರಿಶತಕ ಭಾರಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ ಕರುಣ್. ಮತ್ತೊಂದು ಕಡೆ ಅಶ್ವಿನ್, ಜಡೇಜಾ ಅರ್ಧ ಶತಕಗಳನ್ನು ಗಳಿಸಿ ಭಾರತ ತಂಡ ತನ್ನ ಟೆಸ್ಟ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತದ(759/7 ಡಿಕ್ಲೇರ್) ದಾಖಲೆಯನ್ನು ಸಾಧಿಸಿತು.

Related News

Loading...

Leave a Reply

Your email address will not be published.

error: Content is protected !!