ಕೆಎಎಸ್ ಅಧಿಕಾರಿಯ ಚಾಲಕ ಆತ್ಮಹತ್ಯೆ, ರೆಡ್ಡಿ ಹೆಸರೂ ಪ್ರಸ್ತಾಪ

ಕೆಎಎಸ್ ಅಧಿಕಾರಿಯೊಬ್ಬರ ಚಾಲಕ ಡೆತ್ ನೋಟ್ ಬರೆದಿಟ್ಟು ಬುಧವಾರ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ, ಡೆತ್ ನೋಟ್ ನಲ್ಲಿ ಇತ್ತೀಚೆಗಷ್ಟೇ ಅದ್ಧೂರಿಯಾಗಿ ಮಗಳ ಮದುವೆ ಮಾಡಿದ ಜನಾರ್ಧನ ರೆಡ್ಡಿಯವರ ಹೆಸರನ್ನು ಪ್ರಸ್ತಾಪಿಸಲಾಗಿದೆ.

ಕೆಎಎಸ್ ಅಧಿಕಾರಿ ಭೀಮಾ ನಾಯಕ್ ಅವರ ನೆರವಿನಿಂದ ಜನಾರ್ಧನರೆಡ್ಡಿ 100 ಕೋಟಿ ಕಪ್ಪು ಹಣವನ್ನು ಬದಲಾಯಿಸಿಕೊಂಡಿದ್ದು, ಅದಕ್ಕಾಗಿ ಕೆಎಎಸ್ ಅಧಿಕಾರಿಗೆ ಶೇ.20 ಕಮೀಷನ್ ನೀಡಲಾಗಿದೆ ಎಂದು ಭೀಮಾನಾಯಕ್ ಕಾರು ಚಾಲಕ ರಮೇಶ್ ಆರೋಪಿಸಿದ್ದಾನೆ ಎನ್ನಲಾಗುತ್ತಿದೆ.

ಈ ವಿಷಯ ತಿಳಿದಿದ್ದ ತಾನು ಕೆಎಎಸ್ ಅಧಿಕಾರಿಯಿಂದ ತಾನು ಕಿರುಕುಳ ಅನುಭವಿಸುತ್ತಿರುವುದಾಗಿಯೂ ಡೆತ್ ನೋಟ್ ನಲ್ಲಿ ಚಾಲಕ ಬರೆದಿದ್ದಾನೆ ಎನ್ನಲಾಗಿದೆ.

Related News

Loading...

Leave a Reply

Your email address will not be published.

error: Content is protected !!