ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆಗೆ ಬ್ರಿಟನ್ ಸಿದ್ಧ: ಮೂರನೇ ವ್ಯಕ್ತಿಗೆ ಅವಕಾಶವಿಲ್ಲ ಎಂದ ಭಾರತ

ಬ್ರಿಟನ್ ಸಂಸತ್ತಿನಲ್ಲಿ ಗುರುವಾರ ಕಾಶ್ಮೀರ ವಿಷಯದ ಕುರಿತು ಚರ್ಚೆ ನಡೆಯಿರು. ಕಾಶ್ಮೀರದಲ್ಲಿ ನೆಲೆಸಿರುವ ಸಮಸ್ಯೆಯನ್ನು ಬಗೆಹರಿಸಲು ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಬ್ರಿಟನ್ ಪ್ರಕಟಿಸಿದೆ. ಬ್ರಿಟನ್ ತೀರ್ಮಾನಕ್ಕೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿದೆ. ಕಾಶ್ಮೀರ ವಿಷಯದಲ್ಲಿ ಮೂರನೇ ವ್ಯಕ್ತಿಯ ಮಧ್ಯಪ್ರವೇಶನ್ನು ನಾವು ಸಹಿಸುವುದಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.

ಜಮ್ಮು ಕಾಶ್ಮೀರ ಸೇರಿದಂತೆ ಭಾರತ- ಪಾಕಿಸ್ತಾನ ನಡುವೆ ನೆಲೆಸಿರುವ ಸಮಸ್ಯೆಗಳ ಒರಿಹಾರಕ್ಕೆ ಶಿಮ್ಲಾ ಒಪ್ಪಂದ, ಲಾಹೋರ್ ಡಿಕ್ಲೇರೇಷನ್ ಅನುಗುಣವಾಗಿ ದ್ವಿಪಕ್ಷೀಯ ಚರ್ಚೆ ನಡೆಯಬೇಕೇ ಹೊರತು ಮೂರನೇ ವ್ಯಕ್ತಿಯ ಮಧ್ಯಪ್ರವೇಶ ಮಾಡುವ ಅವಕಾಶವೇ ಇಲ್ಲ ಎಂದು ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ಹೇಳಿದ್ದಾರೆ.

ಬುಧವಾರ ಯುಕೆ ಹೌಸ್ ಆಫ್ ಕಾಮನ್ಸ್ ನಲ್ಲಿ ನಡೆದ ಚರ್ಚೆಯಲ್ಲಿ ಭಾರತ – ಪಾಕ್ ನಡುವೆ ಚರ್ಚೆ ಪ್ರಕ್ರಿಯೆ ಆರಂಭಿಸುವುದರಿಂದಲೇ ಕಾಶ್ಮೀರ ಸಮಸ್ಯೆಗೆ ದೀರ್ಘಕಾಲದ ಪರಿಹಾರ ಸಿಗಲು ಸಾಧ್ಯ. ಈ ಚರ್ಚೆಗಳು ನಡೆಯುವಂತೆ ಬ್ರಿಟನ್ ಮುತುವರ್ಜಿ ವಹಿಸಬೇಕು ಎಂದು ಸದಸ್ಯರು ಮನವಿ ಮಾಡಿದರು.

‘ಲಡಾಖ್, ಜಮ್ಮೂ ಕಾಶ್ಮೀರ ಪ್ರಾಂತ್ಯಗಳಲ್ಲಿ ಕಷ್ಟ ಎದುರಿಸುತ್ತಿರುವ ಅಮಾಯಕ ಜನರಿಗಾಗಿ ಮಧ್ಯವರ್ತಿಯಾಗಲು ನಾವು ಸಿದ್. ಲಡಾಖ್, ಜಮ್ಮೂ, ಕಾಶ್ಮೀರ ಭಾರತದ ಭಾಗವೇ. ಭಾರತ – ಪಾಕ್ ಈ ವಿಷಯದಲ್ಲಿ ವಿಶ್ವಸಂಸ್ಥೆಯ ತೀರ್ಮಾನಕ್ಕೆ ಬದ್ಧವಾಗಿರಬೇಕು’ ಎಂದು ಕನ್ಸರ್ವೇಟಿವ್ ಪಾರ್ಟಿ ಸಂಸದ ಬಾಬ್ ಬ್ಲಾಕ್‌ಮನ್ ಹೇಳಿದ್ದಾರೆ.

Loading...

Leave a Reply

Your email address will not be published.

error: Content is protected !!