ಒಬ್ಬ ಉಗ್ರನ ಹತ್ಯೆ, ಮೂವರು ಉಗ್ರರು ಪರಾರಿಯಾಗಲು ಸಹಕರಿಸಿದ ಕಲ್ಲಸೆಯುವವರು – News Mirchi

ಒಬ್ಬ ಉಗ್ರನ ಹತ್ಯೆ, ಮೂವರು ಉಗ್ರರು ಪರಾರಿಯಾಗಲು ಸಹಕರಿಸಿದ ಕಲ್ಲಸೆಯುವವರು

ಜಮ್ಮೂ ಕಾಶ್ಮೀರ: ಪುಲ್ವಾಮ ಜಿಲ್ಲೆಯ ಮಲಂಗ್ಪೋರಾ ಎಂಬಲ್ಲಿ ಶಂಕಿತ ಉಗ್ರರು ಅಡಗಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಶೋಧ ಕಾರ್ಯಚರಣೆ ಕೈಗೊಂಡಿದ್ದ ಭದ್ರತಾಪಡೆಗಳ ವಿರುದ್ಧ ಸ್ಥಳೀಯ ಕಲ್ಲೆಸೆಯುವವರು ಘರ್ಷಣೆಗೆ ಇಳಿದು, ಸೋಮವಾರ ಮುಂಜಾನೆ ಮೂವರು ಹಿಜ್ಬುಲ್ ಮುಜಾಹಿದೀನ್ ಉಗ್ರರು ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಘಟನೆ ನಡೆದಿದೆ. ಕಾರ್ಯಚರಣೆಯಲ್ಲಿ ಯೋಧರಿಂದ ಒಬ್ಬ ಉಗ್ರ ಹತನಾಗಿದ್ದಾನೆ ಎನ್ನಲಾಗುತ್ತಿದೆ.

ತಪ್ಪಿಸಿಕೊಂಡ ಮೂವರಲ್ಲಿ ಇಬ್ಬರನ್ನು ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಪ್ರಮುಖ ಕಮಾಂಡರ್ ರಿಯಾಜ್ ನೈಕೂ, ಅವನ ಸಹಚರ ಸೈಫುಲ್ಲಾ ಮೀರ್ ಎಂದು ಗುರುತಿಸಲಾಗಿದೆ. ಉಗ್ರರನ್ನು ಭದ್ರತಾಪಡೆಗಳಿಂದ ರಕ್ಷಿಸುವಂತೆ ಸಾರ್ವಜನಿಕವಾಗಿಯೇ ಸಂದೇಶ ನೀಡಲಾಗುತ್ತಿತ್ತು ಎನ್ನಲಾಗಿದೆ. ಭದ್ರತಾಪಡೆಗಳು ನಡೆಸಿದ ಎನ್ಕೌಂಟರಿನಲ್ಲಿ ಸಬ್ಜರ್ ಅಹಮದ್ ಹತನಾದ ನಂತರ ಮೇ ತಿಂಗಳಲ್ಲಿ ನೈಕೂ ನನ್ನು ಹಿಜ್ಬುಲ್ ಉಗ್ರ ಸಂಘಟನೆಯ ಕಮಾಂಡರ್ ಆಗಿ ನೇಮಿಸಲಾಗಿತ್ತು.

ಇತ್ತೀಚೆಗೆ 6 ಪೊಲೀಸ್ ಸಿಬ್ಬಂದಿಯ ಹತ್ಯೆಯ ಸೂತ್ರಧಾರನಾಗಿದ್ದ ಲಷ್ಕರೆ ತೊಯ್ಬಾದ ಕಮಾಂಡರ್ ಬಷೀರ್ ಲಷ್ಕರಿ ಮತ್ತು ಆತನ ಮತ್ತೊಬ್ಬ ಸಹಚರನನ್ನು ಶನಿವಾರ ಭದ್ರತಾಪಡೆಗಳು ಹೊಡೆದುರುಳಿಸಿದ್ದವು.

Contact for any Electrical Works across Bengaluru

Loading...
error: Content is protected !!