ಕಾಶ್ಮೀರ ವಿದ್ಯಾರ್ಥಿಗಳ ಮೇಲೆ ಹಲ್ಲೆ?

ಚುನಾವಣೆ ವೇಳೆ ಕಾಶ್ಮೀರದಲ್ಲಿ ಯೋಧರ ವಿರುದ್ಧ ಕಾಶ್ಮೀರ ಯುವಕರು ಅನುಚಿತವಾಗಿ ವರ್ತಿಸಿದ ಬೆನ್ನಲ್ಲೇ ಮೇವಾರ್ ಯೂನಿವರ್ಸಿಟಿಯಲ್ಲಿ ಕಾಶ್ಮೀರ ವಿದ್ಯಾರ್ಥಿಗಳ ಮೇಲೆ ಅಪರಿಚಿತ ವ್ಯಕ್ತಿಗಳು ಭೀಕರ ಹಲ್ಲೆ ನಡೆಸಿದ್ದಾರೆ. ಜಮ್ಮು ಕಾಶ್ಮೀರಕ್ಕೆ ಸೇರಿದವರಾದ್ದರಿಂದಲೇ ಆ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

ಯೂನಿವರ್ಸಿಟಿ ಆವರಣದಿಂದ ಕ್ಷೌರ ಮಾಡಿಸಿಕೊಳ್ಳಲು ವಿದ್ಯಾರ್ಥಿಗಳು ಹೊರ ಬಂದ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಅಟ್ಟಿಸಿಕೊಂಡು ಹೋಗಿ ಥಳಿಸಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ ಎರಡು ಗುಂಪುಗಳ ನಡುವೆ ಹಲವು ದಿನಗಳಿಂದ ಘರ್ಷಣೆ ನಡೆಯುತ್ತಿರುವುದು ನಿಜ, ಆದರೆ ಇಲ್ಲಿ ಯಾರೂ ಕಾಶ್ಮೀರ ವಿದ್ಯಾರ್ಥಿಗಳಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಈ ಹಿಂದೆ ಮೇವಾರ್ ಯೂನಿವರ್ಸಿಟಿಯ ಹಾಸ್ಟೆಲಿನಲ್ಲಿ ಗೋಮಾಂಸ ಅಡುಗೆ ಮಾಡಿದ್ದಾಗ ಕಾಶ್ಮೀರ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿತ್ತು. ನಂತರ ಅವರು ಬೇಯಿಸಿದ್ದು ದನದ ಮಾಂಸ ಅಲ್ಲ ಎಂದು ಪಶುವೈದ್ಯಕೀಯ ಮಂಡಳಿ ದೃಢಪಡಿಸಿದ ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

Loading...
error: Content is protected !!