ಜಿಲ್ಲೆಯ ಪ್ರತಿ ಮನೆಗೂ ತೆರಳಿ ನಳಿನ್ ಕ್ಷಮೆ ಯಾಚಿಸಲಿ: ಪೂಜಾರಿ – News Mirchi

ಜಿಲ್ಲೆಯ ಪ್ರತಿ ಮನೆಗೂ ತೆರಳಿ ನಳಿನ್ ಕ್ಷಮೆ ಯಾಚಿಸಲಿ: ಪೂಜಾರಿ

ಮಂಗಳೂರು: ಜಿಲ್ಲೆಗೆ ಬೆಂಕಿ ಹಾಕಲು ಸಿದ್ಧ ಎಂದು ವಿವಾದಿತ ಹೇಳಿಕೆ ನೀಡಿದ್ದ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲೆಯ ಪ್ರತಿ ಮನೆಗೂ ತೆರಳಿ ತಮ್ಮ ಮಾತಿಗೆ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಮುಖಂಡ ಬಿ.ಜನಾರ್ಧನ ಪೂಜಾರಿ ಹೇಳಿದ್ದಾರೆ. ಒಬ್ಬ ಜವಾಬ್ದಾರಿಯುತ ಸಂಸದರಾಗಿ ಇಂತಹ ಹೇಳಿಕೆ ನೀಡುವುದು ಸರಿಯಲ್ಲ.

ಇದರ ಜೊತೆಗೆ ನಳಿನ್ ಕುಮಾರ್ ಕಟೀಲ್ ಅವರನ್ನು ಹೊಗಳಿದ ಪೂಜಾರಿ, ನಳಿನ್ ಕುಮಾರ್ ಒಬ್ಬ ಉತ್ತಮ ನಾಯಕ, ಜಿಲ್ಲೆಯಲ್ಲಿ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಆದರೆ ಅವರ ಅಹಂ ಅವರು ಹೀಗೆ ವರ್ತಿಸುವಂತೆ ಮಾಡಿದೆ ಎಂದರು.

ಕಾರ್ತಿಕ್ ರಾಜ್ ಕೊಲೆ ಪ್ರಕರಣದ ಆರೋಪಿಗಳನ್ನು ಹಿಡಿಯಲು ಪೊಲೀಸರು ವಿಫಲರಾದರೆ, ಜಿಲ್ಲೆಗೆ ಬೆಂಕಿ ಹಾಕಲೂ ತಾವು ಸಿದ್ಧ ಎಂದು ನಳಿನ್ ಹೇಳಿಕೆ ನೀಡಿದ್ದರು. ಕಟೀಲ್ ಅವರ ಈ ಹೇಳಿಕೆಗೆ ವ್ಯಾಪಕ‌ ವಿರೋಧಗಳು ವ್ಯಕ್ತವಾಗಿತ್ತು.

Loading...

Leave a Reply

Your email address will not be published.