WWE ನಲ್ಲಿ ಮಿಂಚಿದ ಮೊದಲ ಭಾರತೀಯ ನಾರಿ ಕವಿತಾ ದೇವಿ – News Mirchi

WWE ನಲ್ಲಿ ಮಿಂಚಿದ ಮೊದಲ ಭಾರತೀಯ ನಾರಿ ಕವಿತಾ ದೇವಿ

ವರ್ಲ್ಡ್ ರೆಸ್ಲಿಂಗ್ ಎಂಟರ್ಟೇನ್ಮೆಂಟ್(WWE) ನಲ್ಲಿ ಭಾರತೀಯ ವೃತ್ತಿಪರ ಕುಸ್ತಿಪಟು “ಗ್ರೇಟ್ ಖಲಿ” ವಿಶ್ವದ ಗಮನ ಸೆಳೆದಿದ್ದರು. 2017 ರಲ್ಲಿ ಬ್ಯಾಕ್ಲ್ಯಾಷ್ ನಲ್ಲಿ ರ್ಯಾಂಡಿ ಆರ್ಟನ್ ನನ್ನು ಸೋಲಿಸಿ ಮತ್ತೊಬ್ಬ ಭಾರತೀಯ ಮೂಲದ ಜಿಂದರ್ ಮಹಲ್ ಎಲ್ಲರಿಗೂ ಶಾಕ್ ನೀಡಿದ್ದರು.

ಇದೀಗ ಕೇಸರಿ ಸಲ್ವಾರ್ ಕಮೀಜ್ ಧರಿಸಿ, ಸೊಂಟವನ್ನು ದುಪ್ಪಟ್ಟಾದಿಂದ ಬಿಗಿದು ಮೊಟ್ಟ ಮೊದಲ ಬಾರಿಗೆ ಭಾರತದಿಂದ ಒಬ್ಬ ಮಹಿಳೆ ಡಬ್ಲ್ಯೂಡಬ್ಲ್ಯೂಡಬ್ಲ್ಯೂ (WWE) ನಲ್ಲಿ ಭಾಗವಹಿಸಿ ಇತಿಹಾಸ ಸೃಷ್ಟಿಸಿದ್ದಾರೆ. ಈ ಹಿಂದೆ ವೇಯ್ಟ್ ಲಿಫ್ಟಿಂಗ್ ಪಟುವಾಗಿದ್ದ ಕವಿತಾ ದೇವಿ ಜಾಗತಿಕ ಮಟ್ಟದಲ್ಲಿ ಕೆಲವು ಪದಕಗಳನ್ನೂ ಸಾಧಿಸಿದ್ದಾರೆ. WWE ಪಾದಾರ್ಪಣೆಗೂ ಮುನ್ನ ಕವಿತಾ ದೇವಿ ಪಂಜಾಬಿನಲ್ಲಿರುವ ಗ್ರೇಟ್ ಖಲಿ ಅವರ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದಾರೆ.

ಕಳೆದ ತಿಂಗಳು ಹರಿಯಾಣದ ಕವಿತಾ ದೇವಿ ಸ್ಪರ್ಧೆಯಲ್ಲಿ ನ್ಯೂಜಿಲೆಂಡ್ ನ ದಕೋಟಾ ಕಾಯ್ ಅವರನ್ನು ಎದುರಿಸಿದರು. ಈ ಕುಸ್ತಿಗೆ ಸಂಬಂಧಿಸಿದಂತೆ WWE ಯೂಟ್ಯೂಬ್ ಚಾನಲ್ ನಲ್ಲಿ ಆಗಸ್ಟ್ 31ರಂದು ಪೋಸ್ಟ್ ಮಾಡಿರುವ ವೀಡಿಯೋ ಇದೀಗ ವೈರಲ್ ಆಗಿದೆ. ಈ ವೀಡಿಯೋ ಇದುವರೆಗೂ 30 ಲಕ್ಷ ವೀಕ್ಷಣೆಗಳನ್ನು ಕಂಡಿದೆ. ಕೆಳಗಿನ ವೀಡಿಯೋ ನೋಡಿ…

Click for More Interesting News

Loading...
error: Content is protected !!