ಡಿಜಿಟಲ್ ಪೇಮೆಂಟ್ ಪದ್ದತಿಗೆ ಸೈ ಎಂದ ಕೇರಳ ಆಟೋ ಚಾಲಕರು |News Mirchi

ಡಿಜಿಟಲ್ ಪೇಮೆಂಟ್ ಪದ್ದತಿಗೆ ಸೈ ಎಂದ ಕೇರಳ ಆಟೋ ಚಾಲಕರು

ಪ್ರಧಾನಿ ನರೇಂದ್ರ ಮೋದಿ ಹಳೆಯ 500, 1000 ಮುಖಬೆಲೆಯ ನೋಟುಗಳನ್ನು ಅನಾಣ್ಯೀಕರಿಸಿದ ನಂತರ ಸಾವಿರಾರು ಭಾರತೀಯರು ತಮ್ಮ ಹಣ ವಿತ್ ಡ್ರಾ ಮಾಡಲು ಬ್ಯಾಂಕುಗಳು ಮತ್ತು ಎಟಿಎಂ ಗಳ ಹೊರಗೆ ಉದ್ದದ ಸಾಲುಗಳಲ್ಲಿ ನಿಲ್ಲಬೇಕಾಯಿತು.

ಜನರು ತಮ್ಮ ದೈನಂದಿನ ಖರ್ಚುಗಳಿಗೆ ಕಷ್ಟಪಟ್ಟು ಗಳಿಸಿದ ಹಣವನ್ನು ಪಡೆಯಲು ಹತಾಶರಾಗಿದ್ದರು.

ಆದರೆ ಇದೀಗ ಜನ ನಗದು ರಹಿತ ವ್ಯವಹಾರಕ್ಕೆ ನಿಧಾನವಾಗಿ ಹೊಂದಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇಂದು ಕೇರಳದ ಕೆಲವು ಆಟೋ ರಿಕ್ಷಾ ಚಾಲಕರು ನೋಟು ಕೊರತೆ ಪರಿಸ್ಥಿತಿಯನ್ನು ನಿಭಾಯಿಸಲು ಡಿಜಿಟಲ್ ಪೇಮೆಂಟ್ ಪದ್ದತಿಯನ್ನು ಅಳವಡಿಸಿಕೊಂಡಿದ್ದಾರೆ. ಅಲ್ಲಿನ ಕೆಲ ಆಟೋಗಳಲ್ಲಿ ಒಂದು ಟ್ಯಾಬ್ ಮತ್ತು ಡೆಬಿಟ್/ಕ್ರೆಡಿಟ್ ಕಾರ್ಡ್ ಸ್ವೈಪ್ ಯಂತ್ರಗಳನ್ನು ಅಳವಡಿಸಿಕೊಂಡಿದ್ದಾರೆ. ಪ್ರಯಾಣಿಕರು ತಮ್ಮ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಬಳಸಿ ಹಣ ಪಾವತುಸುತ್ತಾರೆ.

Loading...
loading...
error: Content is protected !!