14 ವರ್ಷದ ಬಾಲಕನನ್ನು ತಂದೆ ಮಾಡಿದ ಯುವತಿ! |News Mirchi

14 ವರ್ಷದ ಬಾಲಕನನ್ನು ತಂದೆ ಮಾಡಿದ ಯುವತಿ!

ಕೊಚ್ಚಿ: ಓದಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ವಯಸ್ಸಿನಲ್ಲಿ 14 ವರ್ಷದ ಬಾಲಕನೊಬ್ಬ ಮಾಡಬಾರದ ತಪ್ಪು ಮಾಡಿ ಒಂದು ಮಗುವಿನ ತಂದೆಯಾಗಿರುವ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ. 8 ನೇ ತರಗತಿ ಓದುತ್ತಿರುವ ಕೇರಳದ ಈ ಬಾಲಕ ತನಗಿಂತ ನಾಲ್ಕು ವರ್ಷ ಹಿರಿಯ ಯುವತಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದು, ಇದೀಗ ಮಗುವಿಗೆ ಜನ್ಮ ನೀಡಿದ್ದಾರೆ. ಆರಂಭದಲ್ಲಿ ಬಾಲಕನ ವಯಸ್ಸು ನೋಡಿ ಈತನೇ ತಂದೆಯೆಂಬುದರ ಕುರಿತು ಅನುಮಾನಗಳು ವ್ಯಕ್ತವಾದರೂ, ಡಿಎನ್‌ಎ ಪರೀಕ್ಷೆಯಲ್ಲಿ ಆತನೇ ಮಗುವಿನ ತಂದೆ ಎಂಬುದು ದೃಢಪಟ್ಟಿದೆ. ಸದ್ಯ ಆ ಮಗುವಿಗೆ ಎರಡು ತಿಂಗಳು.

ಆದರೆ ಆ ಬಾಲಕ ತನ್ನ ಮೇಲೆ ಅತ್ಯಾಚಾರ ನಡೆಸಿದ್ದ ಎಂದು ಆ ಯುವತಿ ಪೊಲೀಸರಿಗೆ ದೂರು ನೀಡಿದ್ದರೆ, ಇದಕ್ಕೆ ಪ್ರತಿಯಾಗಿ ಬಾಲಕನೂ ಯುವತಿಯೇ ನನಗಿಷ್ಟವಿಲ್ಲದಿದ್ದರೂ ಸಂಪರ್ಕ ಬೆಳೆಸಿದಳು ಎಂದು ದೂರು ನೀಡಿದ್ದಾನೆ. ಅಂದಹಾಗೆ ಆ ಯುವತಿ ಮತ್ತು ಆಕೆಯ ತಾಯಿ ಬಾಲಕನ ತಂದೆಯ ಮನೆಯಲ್ಲೇ ವಾಸವಿದ್ದರು. ಆ ಯುವತಿ ಬಾಲಕನಿಗೆ ಸೋದರ ಸಂಬಂಧಿಯೂ ಹೌದು.

  • No items.

Loading...
loading...
error: Content is protected !!