ಅತ್ಯಾಚಾರ ಪ್ರಕರಣದಲ್ಲಿ ಕೇರಳ ಕಾಂಗ್ರೆಸ್ ಶಾಸಕನ ವಿರುದ್ಧ ಎಫ್.ಐ.ಆರ್ – News Mirchi

ಅತ್ಯಾಚಾರ ಪ್ರಕರಣದಲ್ಲಿ ಕೇರಳ ಕಾಂಗ್ರೆಸ್ ಶಾಸಕನ ವಿರುದ್ಧ ಎಫ್.ಐ.ಆರ್

51 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಮಾಡಿದ ಆರೋಪದ ಮೇಲೆ ಕೇರಳ ಕಾಂಗ್ರೆಸ್ ಶಾಸಕನ ವಿರುದ್ಧ ಪೊಲೀಸರು ಎಫ್.ಐ.ಆರ್ ದಾಖಲಿಸಿದ್ದಾರೆ. ಶಾಸಕನ ಕಿರುಕುಳದಿಂದಾಗಿ ಅತ್ಮಹತ್ಯೆಗೆ ಪ್ರಯತ್ನಿಸಿದ್ದಾಗಿ ಮಹಿಳೆ ಹೇಳಿಕೆ ನೀಡಿದ್ದಾಗಿ ಪೊಲೀಸರು ಹೇಳಿದ್ದಾರೆ.

ಕಳೆದ ವಾರ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಮಹಿಳೆ, ಕೋವಲಂ ಕ್ಷೇತ್ರದ ಶಾಸಕ ಎಂ.ವಿನ್ಸೆಂಟ್ ಮೇಲೆ ಅತ್ಯಾಚಾರ ಆರೋಪ ಮಾಡಿದ್ದರು. ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯಿಂದ ನ್ಯಾಯಾಧೀಶರೂ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಆದರೆ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿರುವ ವಿನ್ಸೆಂಟ್, ಇದು ರಾಜಕೀಯ ಪಿತೂರಿ ಎಂದು ಹೇಳಿದ್ದಾರೆ. ಮಹಿಳೆ ಅತ್ಮಹತ್ಯೆಗೆ ಪ್ರಯತ್ನಿಸಿದಾಗ, ಆಕೆಯ ಮನೆಯಲ್ಲಿ ಸಿಪಿಐ(ಎಂ) ನಾಯಕರೂ ಒಬ್ಬರಿದ್ದರು ಎಂದು ಹೇಳಿರುವ ವಿನ್ಸೆಂಟ್, ಮಹಿಳೆಯ ಸಹೋದರನೂ ಸಿಪಿಎಂ ಕಾರ್ಯಕರ್ತ ಎಂದು ಹೇಳುವ ಮೂಲಕ, ಇದು ಸಿಪಿಎಂ ಪಿತೂರಿ ಎಂದು ದೂರಿದ್ದಾರೆ.

Contact for any Electrical Works across Bengaluru

Loading...
error: Content is protected !!