ಮೊಮ್ಮಗಳ ಮೇಲೆ ಅತ್ಯಾಚಾರ ನಡೆಸಿದ ತಾತ, ಸಹಕರಿಸಿದ ಅಜ್ಜಿಯ ಬಂಧನ |News Mirchi

ಮೊಮ್ಮಗಳ ಮೇಲೆ ಅತ್ಯಾಚಾರ ನಡೆಸಿದ ತಾತ, ಸಹಕರಿಸಿದ ಅಜ್ಜಿಯ ಬಂಧನ

ಕೇರಳದಲ್ಲಿ ಮೊಮ್ಮಗಳ ಮೇಲೆ ನಡೆದ ಅತ್ಯಾಚಾರಕ್ಕೆ ಪತಿಗೆ ಸಹಕರಿಸಿದ ಘಟನೆಗೆ ಸಂಬಂಧಿಸಿದಂತೆ ಅಜ್ಜಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಲ್ಲಂ ಜಿಲ್ಲೆಯ ಕುಂದ್ರಾದಲ್ಲಿ ಈ ಘಟನೆ ನಡೆದಿದ್ದು, ತನ್ನಿಬ್ಬರು ಅಪ್ರಾಪ್ತ ಮೊಮ್ಮಗಳ ಮೇಲೆ ತಾತ ಅತ್ಯಾಚಾರ ನಡೆಸಿದರೆ, ಆತನಿಗೆ ಅಜ್ಜಿ ಸಹಕರಿಸಿದ್ದಾಳೆ. ಈ ಆರೋಪದ ಮೇಲೆ ಶನಿವಾರ ಬಾಲಕಿಯರ ಅಜ್ಜಿ ಲತಾ ಮೇರಿಯನ್ನು(62) ಪೊಲೀಸರು ಬಂಧಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಮೊಮ್ಳಗಳ ಮೇಲೆ ಅವರ ತಾತ ವಿಕ್ಟರ್ ಡೇನಿಯಲ್ ಕಳೆದ ಎರಡು ವರ್ಷಗಳಿಂದ ಅತ್ಯಾಚಾರ ನಡೆಸುತ್ತಿದ್ದ. ತಾತನ ಲೈಂಗಿಕ ಕಿರುಕುಳ ತಾಳಲಾರದೆ 10 ವರ್ಷದ ಬಾಲಕಿ ಇತ್ತೀಚೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದರಿಂದಾಗಿ ತಾತನ ಈ ಹೀನ ಕೃತ್ಯ ಬೆಳಕಿಗೆ ಬಂದಿದೆ.

ಕೆಲ ದಿನಗಳ ಹಿಂದೆ ತಾತನನ್ನು ಪೊಲೀಸರು ಬಂಧಿಸಿದ್ದರು. ಈಗ ಕಿಡ್ನಿ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದ ಅಜ್ಜಿಯನ್ನು ಆಸ್ಪತ್ರೆಯಿಂದಲೇ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಪಡೆದಿದ್ದಾರೆ. ಬಾಲಕಿಯರ ಮೇಲಿನ ಲೈಂಗಿಕ ಕಿರುಕುಳ ಅಜ್ಜಿಗೆ ಗೊತ್ತಿದ್ದು, ಆಕೆ ಇದಕ್ಕೆ ಸಹಕರಿಸಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

Loading...
loading...
error: Content is protected !!