ಸ್ವಾಮೀಜಿ ಮರ್ಮಾಂಗ ಕತ್ತರಿಸಿದ್ದ ಪ್ರಕರಣಕ್ಕೆ ಮಹತ್ವದ ತಿರುವು

ತಿರುವನಂತಪುರ: ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ಕೇರಳದ ಪ್ರಕರಣವೊಂದು ಮಹತ್ವದ ತಿರುವು ಪಡೆದಿದೆ. ತಾನು ಅಪ್ರಾಪ್ತಳಿದ್ದಾಗಿನಿಂದ ತನ್ನ ಮಾಲೆ ಸ್ವಾಮಿ ಗಣೇಷಾನಂದ ಅಲಿಯಾಸ್ ಹರಿಸ್ವಾಮಿ ಎಂಬ ಸ್ವಾಮೀಜಿ ಅತ್ಯಾಚಾರ ನಡೆಸುತ್ತಿದ್ದ, ಹೀಗಾಗಿ ಆ ಸ್ವಾಮೀಜಿಯ ಮರ್ಮಾಂಗವನ್ನು ಕತ್ತರಿಸಿದ್ದಾಗಿ ಯುವತಿ ಈ ಹಿಂದೆ ದೂರು ನೀಡಿದ್ದಳು. ಇದೀಗ ಯೂ ಟರ್ನ್ ತೆಗೆದುಕೊಂಡಿರುವ ಯುವತಿ, ಅಸಲಿಗೆ ಸ್ವಾಮೀಜಿ ತನ್ನ ಮೇಲೆ ಲೈಂಗಿಕ ದಾಳಿ ನಡೆಸಿಯೇ ಇಲ್ಲವೆಂದು ಹೇಳಿದ್ದಾಳೆ. ಹಾಗೆ ಪೊಲೀಸರೇ ತನ್ನಿಂದ ಬಲವಂತವಾಗಿ ಹೇಳಿಸಿದ್ದಾರೆಂದು ಆರೋಪಿಸಿರುವ ಯುವತಿ, ಸ್ವಾಮೀಜಿ ತನ್ನನ್ನು ಮುಟ್ಟಿಯೇ ಇಲ್ಲ ಎಂದು ಸ್ವತಃ ಪತ್ರ ಬರೆದು ಸ್ವಾಮೀಜಿ ಪರ ವಕೀಲರಿಗೆ ಕಳುಹಿಸಿದ್ದು, ಆ ಪತ್ರವನ್ನು ವಕೀಲರು ನ್ಯಾಯಾಲಯಕ್ಕೆ ನೀಡಿದ್ದಾರೆ. [ಇದನ್ನೂ ಓದಿ: ಅತ್ಯಾಚಾರ ನಡೆಸಲು ಮುಂದಾದವನ ಮರ್ಮಾಂಗ ಕತ್ತರಿಸಿದ ಯುವತಿ]

ಪೊಲೀಸರ ಮೇಲೆ ಯುವತಿ ಮಾಡಿರುವ ಆರೋಪದಿಂದ ಅವಾಕ್ಕಾಗಿರುವ ಪೊಲೀಸರು, ಆಕೆಗೆ ಸುಳ್ಳು ಪತ್ತೆ ಪರೀಕ್ಷೆ ನಡೆಸಲು ಕೋರ್ಟ್ ಅನುಮತಿ ಪಡೆಯಲು ಚಿಂತನೆ ನಡೆಸುತ್ತಿದ್ದಾರೆ. ಕೇರಳದಲ್ಲಿನ ಕೊಲ್ಲಂ ನ ಪನ್ಮಾನಾ ಆಶ್ರಮದಲ್ಲಿ ಸ್ವಾಮಿ ಗಣೇಷಾನಂದ (ಹರಿಸ್ವಾಮಿ) ಎಂಬ ಸ್ವಾಮೀಜಿಯಿದ್ದ. ಆತ 23 ವರ್ಷದ ಯುವತಿಯ ಕುಟುಂಬಕ್ಕೆ ಆಶ್ರಮದಲ್ಲಿ ಆಶ್ರಯ ನೀಡಿ ಕಳೆದ 8 ವರ್ಷಗಳಿಂದ ಅತ್ಯಾಚಾರ ನಡೆಸುತ್ತಿದ್ದ ಎಂಬ ಆರೋಪಗಳಿವೆ. { ಓದಿ : ಹೊಸ ಪಕ್ಷ ಕಟ್ಟಲಿದ್ದಾರಾ ವರ್ತೂರು? }

ಹಲವು ವರ್ಷಗಳಿಂದ ಆತನ ಲೈಂಗಿಕ ಕಿರುಕುಳವನ್ನು ಸಹಿಸಿಕೊಂಡಿದ್ದ ಯುವತಿ, ಕೊನೆಗೆ ಆತನ ಮರ್ಮಾಂಗವನ್ನು ಕತ್ತರಿಸಿದ್ದಾಗಿ ಪೊಲೀಸರಿಗೆ ಹೇಳಿದ್ದಳು. ಈ ವಿಷಯ ದೇಶಾದ್ಯಂತ ಸುದ್ದಿಯಾಗಿ, ಹಲವು ರಾಜಕಾರಣಿಗಳು, ಮಹಿಳಾ ಸಂಘಟನೆಗಳು ಆಕೆಯ ಕೃತ್ಯವನ್ನು ಬೆಂಬಲಿಸಿದ್ದರು. ಆದರೆ ಸ್ವಾಮೀಜಿ ಮಾತ್ರ ತಾನೇ ತನ್ನ ಮರ್ಮಾಂಗವನ್ನು ಕತ್ತರಿಸಿಕೊಂಡಿದ್ದು, ಯಾವ ಯುವತಿಯ ಮೇಲೂ ಅತ್ಯಾಚಾರದಂತ ಕೃತ್ಯವೆಸಗಿಲ್ಲ ಎಂದು ಹೇಳಿದ್ದ. ಪ್ರಸ್ತುತ ಈ ಪ್ರಕರಣ ತಿರುವನಂತಪುರಂ ನ ಸ್ಥಳೀಯ ನ್ಯಾಯಾಲಯದಲ್ಲಿ ಸೋಮವಾರ ವಿಚಾರಣೆಗೆ ಬರಲಿದೆ. ಅಷ್ಟರೊಳಗೆ ತನ್ನ ಮೇಲೆ ಲೈಂಗಿಕ ಕಿರುಕುಳ ನಡೆದಿಲ್ಲವೆಂದು ಯುವತಿ ಯೂ ಟರ್ನ್ ಹೊಡೆದಿರುವುದು ಪ್ರಕರಣ ತಿರುವು ಪಡೆದಿದೆ.

Related News

Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache