ಆತ್ಮಗಳೊಂದಿಗೆ ಮಾತನಾಡುವ ಹುಚ್ಚು, ಕುಟುಂಬ ಸದಸ್ಯರನ್ನೇ ಹತ್ಯೆ ಮಾಡಿದ |News Mirchi

ಆತ್ಮಗಳೊಂದಿಗೆ ಮಾತನಾಡುವ ಹುಚ್ಚು, ಕುಟುಂಬ ಸದಸ್ಯರನ್ನೇ ಹತ್ಯೆ ಮಾಡಿದ

ಆತ್ಮಗಳೊಂದಿಗೆ ಸಂಭಾಷಣೆ ನಡೆಸುವ ಶಕ್ತಿ ಪಡೆಯಬೇಕು ಎಂಬ ಹುಚ್ಚು ಬಯಕೆಯಿಂದ ವ್ಯಕ್ತಿಯೊಬ್ಬ ತನ್ನ ಇಡೀ ಕುಟುಂಬವನ್ನು ಹತ್ಯೆ ಮಾಡಿದ ಘಟನೆ ಕೇರಳದಲ್ಲಿ ನಡೆದಿದೆ. ಈ ವಿಷಯವನ್ನು ಸ್ವತಃ ಆ ವ್ಯಕ್ತಿಯೇ ಪೊಲೀಸರ ಎದುರು ಬಾಯಿ ಬಿಟ್ಟಿದ್ದಾನೆ.

ಕೇರಳದ ಕಾಡೆಲ್ ಜೀನ್ಸನ್ ರಾಜಾ ಎಂಬ ವ್ಯಕ್ತಿ ತನ್ನ ಕುಟುಂಬ ಸದಸ್ಯರೊಂದಿಗೆ ತಿರುವನಂತಪುರಂ ಸಮೀಪದ ಗ್ರಾಮವೊಂದರಲ್ಲಿ ವಾಸವಿದ್ದ. ಆತನಿಗೆ ಹುಚ್ಚು ಬಯಕೆಯೊಂದಿತ್ತು. ಆತ್ಮಗಳೊಂದಿಗೆ ಮಾತನಾಡಬೇಕು, ಮಾತನಾಡುವ ಶಕ್ತಿ ಒಡೆಯಬೇಕು ಎಂದು. ಅದಕ್ಕಾಗಿ ಆತ ಕ್ಷುದ್ರ ಪೂಜೆ ನಡೆಸಬೇಕಿತ್ತು. ಅದಕ್ಕಾಗಿ ಆತ ತನ್ನ ಕುಟುಂಬ ಸದಸ್ಯರನ್ನೇ ಹತ್ಯೆ ಮಾಡುವ ನಿರ್ಧಾರಕ್ಕೆ ಬಂದ. ಕೊಲ್ಲಲು ಬೇಕಾದ ಗೊಡ್ಡಲಿಯನ್ನು ಇತ್ತೀಚೆಗೆ ಆನ್ಲೈನ್ ನಲ್ಲಿ ಖರೀದಿಸಿದ್ದ ಈತ, ಏಪ್ರಿಲ್ 5 ರಂದು ತನ್ನ ತಾಯಿ, ತಂದೆ ಮತ್ತೊಬ್ಬ ಸಹೋದರಿಯನ್ನು ಕೊಂದಿದ್ದ. ನಂತರ ಏಪ್ರಿಲ್ 7 ರಂದು ತನ್ನ ಅತ್ತೆಯನ್ನೂ ಕೊಂದ.

ಮನೆಯಿಂದ ಸುಟ್ಟ ವಾಸನೆ ಮತ್ತು ಹೊಗೆ ಕಂಡು ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಏಪ್ರಿಲ್ 8 ರಂದು ಪೊಲೀಸರು ಅರ್ಧ ಸುಟ್ಟ ಮೃತದೇಹಗಳನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಹತ್ಯೆಗಳನ್ನು ಮಾಡಿದ್ದು ತಾನೇ ಎಂದು ಈತ ಒಪ್ಪಿಕೊಂಡಿದ್ದಾನೆ. ಹೃದ್ರೋಗ ತಜ್ಣ ಡಾ. ಜೀನ್ ಪದ್ಮಾ, ಅವರ ಪತಿ ಪ್ರೊಫೆಸರ್ ರಾಜ್ ಥಂಕಮ್, ಅವರ ಮಗಳು ಕರೋಲಿನಾ ಮತ್ತು ಚೀನಾದಿಂದ ರಜೆ ಕಳೆಯಲು ಬಂದಿದ್ದ ಸಂಬಂಧಿ ಲಲಿತಾ ಹತ್ಯೆಗೊಳಗಾದವರು.

Loading...
loading...
error: Content is protected !!