ಬುದ್ದಿವಂತರಿಗೆ ಬಿಳಿ, ಸಾಧಾರಣ ವಿದ್ಯಾರ್ಥಿಗಳಿಗೆ ಕೆಂಪು ಸಮವಸ್ತ್ರ : ಕೇರಳ ಶಾಲೆ ವಿವಾದಿತ ನಡೆ – News Mirchi

ಬುದ್ದಿವಂತರಿಗೆ ಬಿಳಿ, ಸಾಧಾರಣ ವಿದ್ಯಾರ್ಥಿಗಳಿಗೆ ಕೆಂಪು ಸಮವಸ್ತ್ರ : ಕೇರಳ ಶಾಲೆ ವಿವಾದಿತ ನಡೆ

ಮಲಪ್ಪುರಂ: ಕೇರಳದಲ್ಲಿನ ಮಲಪ್ಪುರಂನಲ್ಲಿನ ಶಾಲೆಯೊಂದರ ತೀರ್ಮಾನ ವಿವಾದಕ್ಕೆಡೆ ಮಾಡಿಕೊಟ್ಟಿದೆ. ವಿದ್ಯಾರ್ಥಿಗಳ ಪ್ರತಿಭೆಯ ಆಧಾರದ ಮೇಲೆ ಸಮವಸ್ತ್ರ ಜಾರಿ ಮಾಡಲು ಶಾಲೆಯೊಂದು ಸಿದ್ಧವಾಗಿ ನಿಂತಿದೆ. ಬುದ್ದಿವಂತ ವಿದ್ಯಾರ್ಥಿಗಳು ಮತ್ತು ಸಾಧಾರಣ ವಿದ್ಯಾರ್ಥಿಗಳು ಎಂದು ವಿದ್ಯಾರ್ಥಿಗಳನ್ನೇ ಪ್ರತ್ಯೇಕಿಸಿ ಸಮವಸ್ತ್ರ ನಿಯಮವನ್ನು ಉಲ್ಲಿಂಘಿಸಿದ್ದು, ಶಾಲೆಯ ತೀರ್ಮಾನಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೊಟ್ಟಾಯಂ ನ ಅಲ್ ಫರೂಖ್ ಇಂಗ್ಲೀಷ್ ಸ್ಕೂಲ್ ನಲ್ಲಿ 900 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ವರ್ಷದಿಂದ ಹೊಸ ಡ್ರೆಸ್ ಕೋಡ್ ಜಾರಿ ಮಾಡಲು ಆ ಶಾಲೆ ತೀರ್ಮಾನಿಸಿದೆ. ಬುದ್ದಿವಂತ ವಿದ್ಯಾರ್ಥಿಗಳು ಬಿಳಿ ಸಮವಸ್ತ್ರ, ಓದಿನಲ್ಲಿ ಹಿಂದುಳಿದವರಿಗೆ ಕೆಂಪು ಚೆಕ್ಸ್ ಶರ್ಟ್ ಧರಿಸಿ ಬರಬೇಕೆಂದು ಶಾಲೆ ಆದೇಶಿಸಿದೆ.

10 ಲಕ್ಷ ಮುಂಗಡ ಬುಕಿಂಗ್ ಕಂಡ ಸ್ಮಾರ್ಟ್ ಫೋನ್ ಇದು

ಓದಿನಲ್ಲಿನ ಹಿಂದಿರುವ ವಿದ್ಯಾರ್ಥಿಗಳಲ್ಲಿ ಛಲ ಮೂಡಿಸಲು, ಪೈಪೋಟಿಗೆ ನಿಲ್ಲುವಂತೆ ಮಾಡುವದು ಈ ತೀರ್ಮಾನದ ಉದ್ದೇಶ ಎಂದು ಶಾಲೆಯ ಪ್ರಾಂಶುಪಾಲರು ಹೇಳಿದ್ದಾರೆ. ಆದರೆ ಮಕ್ಕಳ ನಡುವೆ ಇಂತಹ ತಾರತಮ್ಯ ಎಷ್ಟು ಸರಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಕೇರಳ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಸುಮೋಟೋ ಕೇಸು ದಾಖಲಿಸಿಕೊಂಡು ಶಾಲಾ ಪ್ರಾಂಶುಪಾಲರು ಮತ್ತು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಂದ 15 ದಿನಗಳ ಒಳಗೆ ವರದಿ ಕೇಳಿದೆ.

Loading...