ಧ್ವನಿವರ್ಧಕದಲ್ಲಿ ಒಂದೇ ಬಾರಿ ಆಜಾನ್, ಕೇರಳ ಮಸೀದಿಯ ಮಹತ್ವದ ನಿರ್ಧಾರ – News Mirchi

ಧ್ವನಿವರ್ಧಕದಲ್ಲಿ ಒಂದೇ ಬಾರಿ ಆಜಾನ್, ಕೇರಳ ಮಸೀದಿಯ ಮಹತ್ವದ ನಿರ್ಧಾರ

ಮಲಪ್ಪುರಂ: ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿನ ಪ್ರಸಿದ್ಧ ಮಸೀದಿಯೊಂದು ಅಪರೂಪದ ನಿರ್ಧಾರವನ್ನು ತೆಗೆದುಕೊಂಡಿದೆ. ಶಬ್ದ ಮಾಲಿನ್ಯವನ್ನು ತಪ್ಪಿಸಲು ಇನ್ನು ಮುಂದೆ ಧ್ವನಿವರ್ಧಕದ ಮೂಲಕ ದಿನಕ್ಕೆ ಐದು ಬಾರಿಯ ಬದಲು ಒಂದೇ ಬಾರಿಗೆ ಆಜಾನ್ ಕೂಗಲು ತೀರ್ಮಾನಿಸಿ ಮಾದರಿಯಾಗಿ ನಿಂತಿದೆ. ಅಷ್ಟೇ ಅಲ್ಲದೆ ಸುತ್ತಮುತ್ತಲಿನ ಮಸೀದಿಗಳು ಧ್ವನಿವರ್ಧಕಗಳನ್ನು ಬಳಸದೇ ಆಜಾನ್ ಕೂಗಲಿವೆ.

ವಜಕ್ಕಾಡ್ ಪ್ರದೇಶದಲ್ಲಿ ವಾಲಿಯಾ ಜುಮಾ ಮಸೀದಿಯೇ ಅತಿ ದೊಡ್ಡ ಮಸೀದಿಯಾಗಿದ್ದು, ಅಲ್ಲಿನ ಮಸೀದಿಗಳ ಸಮಿತಿಗಳು ಮಾಡಿಕೊಂಡ ಒಪ್ಪಂದದಂತೆ ಅಲ್ಲಿ ದಿನಕ್ಕೆ ಒಂದು ಬಾರಿ ಮಾತ್ರ ಧ್ವನಿ ವರ್ಧಕದ ಮೂಲಕ ಆಜಾನ್ ಕೂಗಲು ನಿರ್ಧರಿಸಿದ್ದು ಆರು ದಿನಗಳಿಂದ ಅದನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಸುತ್ತಮುತ್ತಲಿನ 17 ಸಣ್ಣ ಸಣ್ಣ ಮಸೀದಿಗಳು ಧ್ವನಿವರ್ಧಕ ಬಳಸದೆ ಆಜಾನ್ ಕೂಗಲು ತೀರ್ಮಾನಿಸಿವೆ.

ಈ ಮಸೀದಿಯ ನಡೆಯನ್ನು ಗಮನಿಸಿದ ಇತರೆ ಮಸೀದಿಗಳೂ ಅದೇ ದಾರಿಯನ್ನು ಅನುಸರಿಸಲು ಚಿಂತನೆ ನಡೆಸಿವೆ. ವಾಲಿಯಾ ಜುಮಾ ಮಸೀದಿಯ ನಡೆಯನ್ನು ಹಲವು ಎನ್.ಜಿ.ಒ ಗಳು ಮತ್ತು ಅಲ್ಲಿನ ನಿವಾಸಿಗಳು ಪ್ರಶಂಸಿಸಿದ್ದಾರೆ.

ಆರಂಭದಲ್ಲಿ ಹಲವು ಈ ಚಿಂತನೆಯನ್ನು ವಿರೋಧಿಸಿದ್ದರೂ, ನಂತರ ಸಮುದಾಯದ ಜನ ಒಪ್ಪಿಗೆ ಸೂಚಿಸಿದ್ದರು. ಹತ್ತಿರದ ಶಾಲೆಗಳು ಮತ್ತು ಆಸ್ಪತ್ರೆಗಳಿಂದ ಇದುವರೆಗೂ ಧ್ವನಿವರ್ಧಕಗಳಿಂದ ಬರುತ್ತಿದ್ದ ಕೇಳಿ ಬರುತ್ತಿದ್ದ ಶಬ್ದದಿಂದಾಗಿ ಆಗಾಗ ದೂರುಗಳು ಬರುತ್ತಿದ್ದವು. ಈಗ ಶಾಲಾ ಕಾಲೇಜು, ಆಸ್ಪತ್ರೆಗಳಿಗೆ ಪ್ರತಿನಿತ್ಯ ಆಗುತ್ತಿದ್ದ ಕಿರಕಿರಿ ತಪ್ಪಿದಂತಾಗಿದೆ.

ಈ ತಿಂಗಳಾರಂಭದಲ್ಲಿ ಶ್ರೀ ನರಸಿಂಹ ಮೂರ್ತಿ ದೇವಸ್ಥಾನದಲ್ಲಿ ಮುಸ್ಲಿಮರಿಗೆ ಸಸ್ಯಾಹಾರಿ ಇಫ್ತಾರ್ ಕೂಟ್ ಏರ್ಪಡಿಸಿದಾಗ ಈ ಜಿಲ್ಲೆ ಸುದ್ದಿಯಾಗಿತ್ತು. ಮುಸ್ಲಿಮರೂ ಈ ಪುರಾತನ ದೇವಸ್ಥಾನದ ನವೀಕರಣಕ್ಕೆ ನೆರವು ನೀಡಿದ್ದರು.

Loading...