News in Whatsapp

ಕಾಳಿಯ ಅಭಿಷೇಕಕ್ಕೆ ಜನರ ರಕ್ತ ಬೇಕಂತೆ..!

ದೇವರ ವಿಗ್ರಹಗಳಿಗೆ ಹಾಲಿನ ಅಭಿಷೇಕ ನಡೆಸುವುದು ಸರ್ವೇ ಸಾಮಾನ್ಯ, ಇನ್ನು ಕೆಲವೆಡೆ ಪ್ರಾಣಿಗಳನ್ನು ಬಲಿ ನೀಡಿ ಅವುಗಳ ರಕ್ತದಿಂದ ಅಭಿಷೇಕ ಮಾಡುವುದನ್ನು ಕೇಳಿದ್ದೇವೆ. ಆದರೆ ಜನರ ರಕ್ತದಿಂದ ದೇವರಿಗೆ ಅಭಿಷೇಕ ಮಾಡಲು ಜನರ ರಕ್ತಬೇಕೆಂದು ಪ್ರಕಟಿಸಿರುವ ಜಾಹೀರಾತು ಸುದ್ದಿಯಲ್ಲಿದೆ.

ಕೇರಳದಲ್ಲಿನ ಜಾಹೀರಾತು ಕಾಣಿಸಿಕೊಂಡಿದೆ. ಅಲ್ಲಿನ ಕಾಳಿ ಮಾತೆಯ ದೇಗುಲಕ್ಕೆ ಅಭಿಷೇಕ ಮಾಡಲು ಬೃಹತ್ ಪ್ರಮಾಣದಲ್ಲಿ ರಕ್ತ ಬೇಕಿದ್ದು, ಭಕ್ತರು ಆದಷ್ಟು ಬೇಗ ಅವರ ರಕ್ತವನ್ನು ದಾನ ಮಾಡಿ ಕಳುಹಿಸಬೇಕು ಎಂದು ತಿರುವನಂತಪುರ ಜಿಲ್ಲಾ ವ್ಯಾಪ್ತಿಯ ವಿಧುರ ಎಂಬ ಗ್ರಾಮದಲ್ಲಿ ದೇಗುಲದ ಅಧಿಕಾರಿಗಳು ಬಹಿರಂಗವಾಗಿಯೇ ಜಾಹೀರಾತು ನೀಡಿದ್ದಾರೆ. ಈ ದೇಗುಲದಲ್ಲಿ ನಡೆಯುವ ಉತ್ಸವದ ಭಾಗವಾಗಿ ರಕ್ತಾಭಿಷೇಕ ನಡೆಸಬೇಕಿರುವುದರಿಂದ ರಕ್ತ ಕಳುಹಿಸಲು ಮನವಿ ಮಾಡಲಾಗಿದೆ.

ಸರ್ಕಾರದಿಂದ ಮಾನ್ಯತೆ ಪಡೆದ ವೈದ್ಯರ ಮೂಲಕವೇ ಭಕ್ತರಿಂದ ರಕ್ತ ಸಂಗ್ರಹಿಸಲಾಗುತ್ತದೆ ಎಂದೂ ಜಾಹೀರಾತಿನಲ್ಲಿ ತಿಳಿಸಲಾಗಿದೆ. ಮಾರ್ಚ್ 12 ರಂದು ಸಂಜೆ 6 ಗಂಟೆಗೆ ಈ ಉತ್ಸವ ನಡೆಯಲಿದೆ. ಈ ಉತ್ಸವವನ್ನು ಮಹಾಘೋರ ಕಾಳಿಯಜ್ಞವೆಂದು ಕರೆಯುತ್ತಾರಂತೆ. ಒಟ್ಟು ಹದಿನಾಲ್ಕು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಎರಡನೇ ದಿನ ಕಾಳಿಮಾತೆಗೆ ರಕ್ತಾಭಿಷೇಕ ನಡೆಸಲಾಗುತ್ತದೆಯಂತೆ. ಇದನ್ನು ಕಾಳಿಮಾತೆಯ ಹಸಿವನ್ನು ನೀಗಿಸುವ ಆಚರಣೆ ಎಂದೂ ಕರೆಯಲಾಗುತ್ತದೆ.

Get Latest updates on WhatsApp. Send ‘Subscribe’ to 8550851559