ಮಹಿಳೆಯೊಂದಿಗೆ ಅಶ್ಲೀಲ ವರ್ತನೆ ಆರೋಪ, ಕೇರಳ ಸಾರಿಗೆ ಸಚಿವೆ ರಾಜೀನಾಮೆ

ಮಹಿಳೆಯೊಂದಿಗೆ ಅಶ್ಲೀಲವಾಗಿ ವರ್ತಿಸಿದ ಆರೋಪದ ಹಿನ್ನೆಲೆಯಲ್ಲಿ ಕೇರಳ ಸಾರಿಗೆ ಸಚಿವ ಎ.ಕೆ.ಶಶೀಂದ್ರನ್ ಭಾನುವಾರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇತ್ತೀಚೆಗೆ ಸುದ್ದಿ ವಾಹಿನಿಯೊಂದು ಸಚಿವರು ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ಸಂಬಂಧಿಸಿದ ಆಡಿಯೋ ಒಂದನ್ನು ಪ್ರಸಾರ ಮಾಡಿತ್ತು. ಆದರೆ ಈ ಆರೋಪವನ್ನು ನಿರಾಕರಿಸಿರುವ ಸಚಿವ ಶಶೀಂದ್ರನ್ ಈ ಪ್ರಕರಣದ ಕುರಿತು ತನಿಖೆಗೆ ಒತ್ತಾಯಿಸಿದ್ದಾರೆ.

ನನ್ನ ಮೇಲೆ ಬಂದಿರುವ ಆರೋಪದ ಕುರಿತು ತನಿಖೆ ನಡೆಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ. ಆದರೆ ನನ್ನ ಪಕ್ಷದ ಘನತೆಯನ್ನು ಕಾಪಾಡಬೇಕಾದ್ದು ನನ್ನ ಜವಾಬ್ದಾರಿ, ಹೀಗಾಗಿ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಶಶೀಂದ್ರನ್ ಹೇಳಿದ್ದಾರೆ.