ಈ ವಿಷಯದಲ್ಲಿ ಭಾರತದ ಕನಸು ಸದ್ಯಕ್ಕೆ ಕೈಗೂಡುವ ಸಾಧ್ಯತೆ ಇಲ್ಲ

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯತ್ವ ಪಡೆಯುವ ಭಾರತದ ಕನಸು ಸದ್ಯಕ್ಕೆ ಕನಸಾಗಿಯೇ ಉಳಿಯುವ ಸಾಧ್ಯತೆಗಳು ಗೋಚರಿಸುತ್ತಿವೆ. ವಿಶ್ವಸಂಸ್ಥೆಗೆ ಅಮೆರಿಕ ಪರ ರಾಯಭಾರಿಯಾಗಿರುವ ನಿಕ್ಕೀ ಹೇಲೆ ಅವರು ನೀಡಿರುವ ಹೇಳಿಕೆ ಈ ವಿಷಯವನ್ನು ದೃಡಪಡಿಸುತ್ತಿದೆ. ವೀಟೋ ಅಧಿಕಾರದ ವಿಷಯದಲ್ಲಿ ಯಾವುದೇ ದೇಶದ ಮಧ್ಯಪ್ರವೇಶಿಸಬಾರದು ಎಂಬ ನಿಲುವನ್ನು ಶಾಶ್ವತ ಸದಸ್ಯ ದೇಶಗಳು ಹೊಂದಿವೆ. ಇದೇ ಭಾರತದ ಸೇರ್ಪಡೆಗೆ ಅಡ್ಡಿಯಾಗಿದೆ ಎಂದು ಅವರು ಹೇಳಿದ್ದಾರೆ. ವಾಷಿಂಗ್ಟನ್ ನಲ್ಲಿ ಆಯೋಜಿಸಿದ್ದ ಭಾರತ ಅಮೆರಿಕಾ ಫ್ರೆಂಡ್ಷಿಪ್ ಕೌನ್ಸಿಲ್ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.

[ಇದನ್ನೂ ಓದಿ: ಉತ್ತಮ ಬ್ಯಾಟರಿ ಸಾಮರ್ಥ್ಯದ ಈ ಸ್ಮಾರ್ಟ್ ಫೋನ್ ಬೆಲೆ ರೂ.4,999]

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ರಚನೆ ತಿದ್ದುಪಡಿಯಲ್ಲಿ ವೀಟೋ ಅಧಿಕಾರ ಮಹತ್ವದ್ದಾಗಿದೆ. ಈಗಾಗಲೇ ಶಾಶ್ವತ ಸದಸ್ಯ ರಾಷ್ಟ್ರಗಳು ವೀಟೋ ಅಧಿಕಾರವನ್ನು ಬಿಟ್ಟುಕೊಡಲು ಇಷ್ಟಪಡುತ್ತಿಲ್ಲ, ಮುಖ್ಯವಾಗಿ ಚೀನಾ ಮತ್ತು ರಷ್ಯಾಗಳಿಂದ ವೀಟೋ ಅಧಿಕಾರ ಚಲಾವಣೆ ವಿಷಯದಲ್ಲಿ ತಿದ್ದುಪಡಿಗೆ ಪ್ರಬಲ ವಿರೋಧ ವ್ಯಕ್ತವಾಗುತ್ತಿವೆ.

ಭಾರತಕ್ಕೆ ಅನುಕೂಲಕರವಾಗಿ ಭದ್ರತಾ ಮಂಡಳಿಯಲ್ಲಿ ಸುಧಾರಣೆ ತರಲು ಅಮೆರಿಕಾ ಮುಕ್ತವಾಗಿದೆ. ಆದರೆ ಭಾರತಕ್ಕೆ ಶಾಶ್ವತ ಸದಸ್ಯತ್ವ ನೀಡಲು ಇತರೆ ಸದಸ್ಯ ರಾಷ್ಟ್ರಗಳ ವೀಟೋ ಅಧಿಕಾರಿ ಅಡ್ಡಿಯಾಗಿದೆ ಎಂದು ನಿಕ್ಕಿ ಹೇಲೆ ಹೇಳಿದ್ದಾರೆ. ಕೇವಲ ಅಮೆರಿಕದಿಂದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ತಿದ್ದುಪಡಿ ತರಲು ಸಾಧ್ಯವಿಲ್ಲ. ಇದು ವಿಶ್ವಸಂಸ್ಥೆಗೆ ಸಂಬಂಧಿಸಿದ ವಿಷಯ. ಈ ವಿಷಯಕ್ಕೆ ಸಂಬಂಧಿಸಿದಂತೆ ಭಾರತ ಮತ್ತಷ್ಟು ದೇಶಗಳ ಬೆಂಬಲ ಪಡೆಯುವ ಮೂಲಕ ಭಾರತದ ಕನಸು ನನಸಾಗಬಹುದು ಎಂದು ನಿಕ್ಕಿ ಹೇಲೆ ಹೇಳಿದ್ದಾರೆ.

Get Latest updates on WhatsApp. Send ‘Add Me’ to 8550851559