ಪ್ರೀತಿ, ದ್ವೇಷ ಎರಡನ್ನೂ ಸಮಾನವಾಗಿ ಸ್ವೀಕರಿಸುವೆ – News Mirchi

ಪ್ರೀತಿ, ದ್ವೇಷ ಎರಡನ್ನೂ ಸಮಾನವಾಗಿ ಸ್ವೀಕರಿಸುವೆ

ಕಿಚ್ಚ ಸುದೀಪ್ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಅಪಾರ ಅಭಿಮಾನ ಬಳಗವಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಅದು ಹೇಗೆ ಅಷ್ಟು ಜನರ ಪ್ರೀತಿ ಗಳಿಸಿದಿರಿ ಎಂಬ ಪ್ರಶ್ನೆಗೆ ಸ್ವತಃ ಸುದೀಪ್ ಉತ್ತರಿಸಿದ್ದಾರೆ.

“ಇತರೆ ಹೀರೋಗಳ ಅಭಿಮಾನಿಗಳು ನಿಮ್ಮನ್ನು ದ್ವೇಷಿಸುತ್ತಾ ನಿಮ್ಮ ವಿರುದ್ಧವಾಗಿ ವದಂತಿಗಳನ್ನು ಹಬ್ಬಿಸುತ್ತಿರುತ್ತಾರೆ. ಆದರೂ ಅದು ಹೇಗೆ ನಿಮ್ಮನ್ನು ಅಷ್ಟು ಜನ ಪ್ರೀತಿಸಲು ಸಾಧ್ಯ?” ಎಂದು ಟ್ವಿಟರ್ ನಲ್ಲಿ ಸುದೀಪ್ ಅವರಿಗೆ ಒಂದು ಪ್ರಶ್ನೆ ಎದುರಾಯಿತು. ಅದಕ್ಕೆ ಸುದೀಪ್ ಉತ್ತರಿಸಿದ್ದು ಹೀಗೆ.

“ನಾನು ನನ್ನ ಕೆಲಸ ಮಾಡುವುದನ್ನು ಮಾತ್ರ ಕಲಿತಿದ್ದೇನೆ, ಜನರಿಗೆ ಪ್ರೀತಿ ಮಾಡೋ ಹಕ್ಕು ಇದ್ದಾಗ, ದ್ವೇಷಿಸುವ ಹಕ್ಕೂ ಇರುತ್ತದೆ. ಎರಡನ್ನೂ ನಾನು ಸಮಾನವಾಗಿ ಗೌರವದಿಂದ ಸ್ವೀಕರಿಸುತ್ತೇನೆ” ಎಂದು ಹೇಳಿದ್ದಾರೆ.

 

Loading...