ಹಿಂಸೆಗಿಳಿಯುತ್ತಿರುವ ಗೋರಕ್ಷಕರ ವಿರುದ್ಧ ಪ್ರಧಾನಿ ಆಕ್ರೋಶ – News Mirchi

ಹಿಂಸೆಗಿಳಿಯುತ್ತಿರುವ ಗೋರಕ್ಷಕರ ವಿರುದ್ಧ ಪ್ರಧಾನಿ ಆಕ್ರೋಶ

ಅಹಮದಾಬಾದ್: ಗೋರಕ್ಷಣೆ ಹೆಸರಿನಲ್ಲಿ ಹಿಂಸಾತ್ಮಕ ದಾಳಿಗೆ ಮುಂದಾಗುತ್ತಿರುವವರ ವಿರುದ್ಧ ಪ್ರಧಾನಮಂತ್ರಿ ನರೇಂದ್ರ ಮೋದಿ ಆಕ್ರೋಶ ವ್ಯಕ್ತಪಡಿಸಿದರು. ಗೋವುಗಳ ಹೆಸರಿನಲ್ಲಿ ಜನರನ್ನು ಕೊಲ್ಲುವುದು ಸಹಿಸಲು ಸಾಧ್ಯವಿಲ್ಲ. ಇಂತಹ ಕ್ರಮಗಳನ್ನು ಮಹಾತ್ಮ ಗಾಂಧಿಯವರೂ ಒಪ್ಪಿಕೊಳ್ಳುತ್ತಿರಲಿಲ್ಲ ಎಂದು ಹೇಳಿದ್ದಾರೆ. ಗುರುವಾರ ಗುಜರಾತ್ ಪ್ರವಾಸ ಕೈಗೊಂಡ ಅವರು, ಅಹಮದಾಬಾದ್ ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಿದರು. ಅಹಿಂಸೆಯ ನೆಲ ನಮ್ಮದು. ಮಹಾತ್ಮ ಗಾಂಧಿಯವರು ಹುಟ್ಟಿದ ನೆಲ ನಮ್ಮದು. ಈ ವಿಷಯವನ್ನೇಕೆ ಮರೆಯುತ್ತಿದ್ದೀರಿ? ಎಂದು ಅವರು ನೋವಿನಿಂದ ಪ್ರಶ್ನಿಸಿದರು.

ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುವ ಅಧಿಕಾರ ಈ ದೇಶದಲ್ಲಿ ಯಾರಿಗು ಇಲ್ಲ ಎಂದು ಹಿಂಸೆಗೆ ಇಳಿಯುತ್ತಿರುವ ಗೋರಕ್ಷಕರಿಗೆ ಪ್ರಬಲ ಸಂದೇಶವನ್ನು ನೀಡಿದರು. ಅದಕ್ಕೂ ಮುನ್ನ ಸಬರ್ಮತಿ ಆಶ್ರಮ ನೂರು ವರ್ಷ ಪೂರ್ಣಗೊಳಿಸಿದ ಅಂಗವಾಗಿ ಅಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಪಾಲ್ಗೊಂಡರು. ಹಿಂಸೆಯಿಂದ ಯಾವುದೇ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ ಎಂದು ಅವರು ಹೇಳಿದರು.

Contact for any Electrical Works across Bengaluru

Loading...
error: Content is protected !!