ಮಲಸಹೋದರನ ಮೇಲೆ ವಿಷಪ್ರಯೋಗ ನಡೆಸಿ ಕೊಂದರಾ ಉತ್ತರ ಕೊರಿಯಾ ಅಧ್ಯಕ್ಷ? – News Mirchi

ಮಲಸಹೋದರನ ಮೇಲೆ ವಿಷಪ್ರಯೋಗ ನಡೆಸಿ ಕೊಂದರಾ ಉತ್ತರ ಕೊರಿಯಾ ಅಧ್ಯಕ್ಷ?

ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರ ಮಲಸಹೋದರ ನಾಮ್ ನನ್ನು ಮಲೇಷ್ಯಾದ ವಿಮಾನ ನಿಲ್ದಾಣದಲ್ಲಿ ಇಬ್ಬರು ಮಹಿಳೆಯರು ವಿಷ ಸ್ಪ್ರೇ ಮಾಡಿ ಕೊಂದಿದ್ದಾರೆ. ತನ್ನ ಮಲಸಹೋದರ ನ ಕೊಲೆಯನ್ನು ಅಧ್ಯಕ್ಷ ಕಿಮ್ ಜಾಂಗ್ ಉನ್ ಮಾಡಿಸಿದ್ದಾರೆ ಎಂದು ಎಲ್ಲರೂ ಭಾವಿಸುತ್ತಿದ್ದಾರೆ. ತನ್ನ ಹುದ್ದೆಗೆ ಎಲ್ಲಿ ಅಡ್ಡಿಯಾಗುತ್ತಾರೋ ಎಂಬ ಅನುಮಾನದಿಂದಲೇ ಉನ್ ಈ ಕೆಲಸ ಮಾಡಿಸಿದ್ದಾರೆ ಎನ್ನಲಾಗುತ್ತಿದೆ. ಅಸಲಿಗೆ ಉನ್ ಗೆ ಬದಲಾಗಿ ಕೊಲೆಯಾದ ಉತ್ತರ ಕೊರಿಯಾದ ಅಧ್ಯಕ್ಷರಾಗಬೇಕಿತ್ತು. ಆದರೆ ಡಿಸ್ನಿಲ್ಯಾಂಡ್ ನೋಡಬೇಕೆಂಬ ಸಣ್ಣ ಆಸೆ ನಾಮ್ ಗೆ ಉತ್ತರ ಕೊರಿಯಾ ಅಧ್ಯಕ್ಷರಾಗುವ ಅವಕಾಶ ತಪ್ಪಲು ಕಾರಣವಾಯಿತು.

ಅಧಿಕಾರ ಮೋಹಕ್ಕೆ ಸಹೋದರನನ್ನೇ ಕೊಂದರಾ?

ಇದುವರೆಗೂ ನಾಮ್ ಗೆ ಚೀನಾ ರಕ್ಷಣೆ ನೀಡುತ್ತಾ ಬಂದಿತ್ತು. ಆದರೆ ನಾಮ್ ಮಲೇಷ್ಯಾಗೆ ಬಂದ ನಂತರ ಸುಲಭವಾಗಿ ಕೊಲೆ ಮಾಡಲಾಗಿದೆ. ನಾಮ್ ಮತ್ತು ಉನ್ ಇಬ್ಬರೂ ಮಲಸಹೋದರರು. ತಂದೆ ಕಿಮ್ ಜಾಂಗ್ ನಿಧನದ ನಂತರ ನಾಮ್ ಉತ್ತರ ಕೊರಿಯಾ ಅಧ್ಯಕ್ಷರಾಗಬೇಕಿತ್ತು. ಆದರೆ 2001ರಲ್ಲಿ ನಾಮ್ ಗೆ ಟೋಕಿಯೋದಲ್ಲಿನ ಡಿಸ್ನಿಲ್ಯಾಂಡ್ ನ ನೋಡುವ ಬಯಕೆಯಾಗಿ ನಕಲಿ ಪಾಸ್ಪೋರ್ಟ್ ಬಳಸಿ ಹೋಗಲು ಪ್ರಯತ್ನಿಸಿದ್ದರು. ಆದರೆ ಜಪಾನ್ ಅಧಿಕಾರಿಗಳು ನಾಮ್ ನನ್ನು ಹಿಡಿದು ಚೀನಾಗೆ ಗಡೀಪಾರು ಮಾಡಿದರು. ಇದನ್ನು ಅವಮಾನವೆಂಬಂತೆ ಭಾವಿಸಿದ ತಂದೆ ಕಿಮ್ ಜಾಂಗ್ ಇಲ್ ಮಗನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೊನೆಗೆ ನಾಮ್ 2003 ರಲ್ಲಿ ದೇಶ ಬಿಟ್ಟು ಹೊರಬಂದರು. 2011ರಲ್ಲಿಯೇ ಉನ್ ಉತ್ತರ ಕೊರಿಯಾ ಅಧ್ಯಕ್ಷರಾದರು. ದೇಶದಿಂದ ಹೊರಬಂದ ನಾಮ್, ಪ್ಲೇಬಾಯ್ ಆಗಿ ಪ್ರಸಿದ್ಧರಾದರು. ಹಲವು ಸಂದರ್ಶನಗಳಲ್ಲಿ ಉನ್ ಆಡಳಿತವನ್ನು ಟೀಕಿಸುತ್ತಿದ್ದರು, ಉನ್ ಗೆ ಸರಿಯಾದ ಅನುಭವವಿಲ್ಲ, ಆತ ಅಧ್ಯಕ್ಷನಾಗಿ ಮುಂದುವರೆಯಲು ಅಸಮರ್ಥ ಎಂದು ಹೇಳುತ್ತಿದ್ದರು. ಹೀಗಾಗಿ ನಾಮ್ ಬದುಕಿದ್ದರೆ ಮುಂದೊಂದು ದಿನ ತನ್ನ ಅಧ್ಯಕ್ಷ ಹುದ್ದೆಗೇ ಕಂಟಕ ಎಂದು ಭಾವಿಸಿ ಉನ್.. ನಾಮ್ ನನ್ನು ಕೊಂದಿದ್ದಾರೆ ಎಂದು ಹೇಳಲಾಗುತ್ತಿದೆ.

Loading...

Leave a Reply

Your email address will not be published.