ದ್ವೇಷದ ಪರಮಾವಧಿ, ಕಿರಣ್ ಬೇಡಿಯನ್ನು ಹಿಟ್ಲರ್ ನಂತೆ ಚಿತ್ರಿಸಿದ ಕಾಂಗ್ರೆಸ್ – News Mirchi

ದ್ವೇಷದ ಪರಮಾವಧಿ, ಕಿರಣ್ ಬೇಡಿಯನ್ನು ಹಿಟ್ಲರ್ ನಂತೆ ಚಿತ್ರಿಸಿದ ಕಾಂಗ್ರೆಸ್

ಪುದುಚೇರಿ: ಆಡಳಿತ ಪಕ್ಷ ಕಾಂಗ್ರೆಸ್ ಮತ್ತು ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ನಡುವಿನ ವಿವಾದ ದಿನೇ ದಿನೇ ಹೆಚ್ಚಾಗುತ್ತಿದೆ. ಜುಲೈ 1 ರಂದು ಕೇಂದ್ರ ಸರ್ಕಾರ ನಾಮನಿರ್ದೇಶನ ಮಾಡಿದ ಮೂವರಿಂದ ಕಿರಣ್ ಬೇಡಿ ಪ್ರಮಾಣ ವಚನ ಸ್ವೀಕಾರ ಮಾಡಿಸಿದ್ದು ಕಾಂಗ್ರೆಸ್ ನ ವಿರೋಧಕ್ಕೆ ಕಾರಣವಾಗಿತ್ತು. ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ನಾಯಕರು, ಸಚಿವರು ಆಕೆಯನ್ನು ಗುರಿಯಾಗಿಸಿಕೊಂಡು ಟೀಕೆಗಳಿಗೆ ಇಳಿಯುತ್ತಿದ್ದಾರೆ.

ಕಿರಣ್ ಬೇಡಿಯವರ ಮೇಲಿನ ಅವರ ದ್ವೇಷ ಎಲ್ಲಿಯವರೆಗೂ ಹೋಗಿದೆಯೆಂದರೆ, ಪೋಸ್ಟರ್ ಗಳಲ್ಲಿ ಕಿರಣ್ ಬೇಡಿಯವರನ್ನು ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ನಂತೆ ಚಿತ್ರಿಸಿ ಪೋಸ್ಟರ್ ಅಂಟಿಸಿ ವಿಕೃತಿ ಮೆರೆದಿದ್ದಾರೆ. ಇದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ತವಳಕುಪ್ಪಂ ಜಂಕ್ಷನ್ ನಲ್ಲಿ ಕಿರಣ್ ಬೇಡಿ ಒಬ್ಬ ಹಿಟ್ಲರ್ ಎಂಬ ವಾಲ್ ಪೋಸ್ಟರ್ ಗಳು ಕಾಣಿಸಿಕೊಂಡಿವೆ.

ಪುದುಚೇರಿ ಮುಖ್ಯಮಂತ್ರಿ ನಾರಾಯಣಸ್ವಾಮಿ

ಕಾಂಗ್ರೆಸ್ ಮತ್ತದರ ಮಿತ್ರಪಕ್ಷಗಳು ಬೇಡಿಯವರನ್ನು ಜರ್ಮನಿಯ ಸರ್ವಾಧಿಕಾರಿಯಾಗಿದ್ದ ಹಿಟ್ಲರ್ ನಂತೆ ಚಿತ್ರಿಸಿದ್ದನ್ನು ನೋಡಿ ಕೇಂದ್ರ ಸರ್ಕಾರ ಕೆಂಡಾಮಂಡಲವಾಗಿದೆ. ಇತ್ತೀಚೆಗೆ ನೇಮಕವಾದ ಮೂವರು ನಾಮಿನೇಟೆಡ್ ಶಾಸಕರ ವಿಷಯಕ್ಕೆ ಸಂಬಂಧಿಸಿದಂತೆ ಆಕ್ರೋಶಗೊಂಡಿರುವ ಕಾಂಗ್ರೆಸ್ ನಾಯಕರು, ಕೇಂದ್ರ ಸರ್ಕಾರದ ಮತ್ತು ಕಿರಣ್ ಬೇಡಿ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್, ಡಿಎಂಕೆ, ಎಡಪಕ್ಷಗಳು, ವಿಸಿಕೆ ಪಕ್ಷಗಳು ಒಂದಾಗಿ ಬೇಡಿ ವರ್ತನೆಯನ್ನು ವಿರೋಧಿಸುತ್ತಿದ್ದು, ಆಕೆಯನ್ನು ಹಿಂದೆ ಕರೆಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.

Contact for any Electrical Works across Bengaluru

Loading...
error: Content is protected !!