ವಾಕಿ ಟಾಕಿ ವಿವಾದದಲ್ಲಿ ಕೊಹ್ಲಿ! – News Mirchi

ವಾಕಿ ಟಾಕಿ ವಿವಾದದಲ್ಲಿ ಕೊಹ್ಲಿ!

ನವದೆಹಲಿ: ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ನಿಯಮಗಳ ಪ್ರಕಾರ, ಕ್ರಿಕೆಟ್ ಪಂದ್ಯ ನಡೆಯುತ್ತಿರುವ ವೇಳೆ ಆಟಗಾರರು ವಾಕಿ ಟಾಕಿಗಳು ಬಳಸಕೂಡದು. ಆದರೆ ಬುಧವಾರ ನ್ಯೂಜಿಲೆಂಡ್ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ವಾಕಿ ಟಾಕಿಯಲ್ಲಿ ಮಾತನಾಡುತ್ತಾ ಕಾಣಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಹ್ಲಿ ವಿರುದ್ಧ ಐಸಿಸಿ ಯಾವ ಕ್ರಮ ಕೈಗೊಳ್ಳಲಿದೆ ಎಂಬ ಮಾತುಗಳು ಕೇಳಿಬಂದವು.

ಆದರೆ ಕೊಹ್ಲಿ ವಾಕಿ ಟಾಕಿ ಬಳಸಲು ಮೊದಲೇ ಅನುಮತಿ ಪಡೆದಿದ್ದಾಗಿ ತಿಳಿದುಬಂದಿದೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದಲ್ಲಿ ಕೊಹ್ಲಿ ವಾಕಿ ಟಾಕಿ ಮೂಲಕ ಸಂಭಾಷಣೆ ನಡೆಸಿದರು. ಆದರೆ ಅನುಮತಿ ಪಡೆದೇ ಕೊಹ್ಲಿ ಆ ಉಪಕರಣವನ್ನು ಬಳಿಸಿದ್ದರು. ಸಾಮಾನ್ಯವಾಗಿ ಡ್ರೆಸಿಂಗ್ ರೂಮ್ ನಲ್ಲಿ ಆಟಗಾರರ ಮೊಬೈಲ್ ಗಳಿಗೆ ಅನುಮತಿ ನೀಡುವುದಿಲ್ಲ.

ಡಗೌಟ್ ಬಳಿ ಇದ್ದ ಕೊಹ್ಲಿ ಸಪೋರ್ಟ್ ಸ್ಟಾಫ್ ನಿಂದ ಸಹಾಯ ಕೇಳಲು ಅದನ್ನು ಬಳಸಿದರು. ಅದಕ್ಕಾಗಿ ಮೊದಲೇ ಎಸಿಯು ಮ್ಯಾನೇಜರ್ ರಿಂದ ಅನುಮತಿ ಪಡೆದರು. ಆದ್ದರಿಂದ ಕೊಹ್ಲಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಈಗಾಗಲೇ ಈ ಕುರಿತು ಕೊಹ್ಲಿಗೆ ಕ್ಲೀನ್ ಚಿಟ್ ನೀಡಿದ್ದೇವೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಐಸಿಸಿ ವಕ್ತಾರರೊಬ್ಬರು ವಿವರಿಸಿದರು.

Get Latest updates on WhatsApp. Send ‘Add Me’ to 8550851559

Loading...