25 ಕೋಟಿ ನೋಟು ಪರಿವರ್ತನೆಯಲ್ಲಿ ತೊಡಗಿದ್ದ ಉದ್ಯಮಿಯ ಬಂಧನ

​ರೂ. 25 ಕೋಟಿ ಮೌಲ್ಯದ ರದ್ದಾದ ನೋಟುಗಳನ್ನು ಹೊಸ ನೋಟುಗಳಿಗೆ ಪರಿವರ್ತಿಸುತ್ತಿದ್ದ ಕೋಲ್ಕತಾ ಮೂಲದ ಉದ್ಯಮಿ ಪಾರಸ್ಮಲ್ ಲೋಧಾ ಎಂಬುವವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.

ಚೆನ್ನೈನ ಉದ್ಯಮಿ, ಬುಧವಾರ ಇಂತದ್ದೇ ಆರೋಪಿಗಳಿಂದ ಬಂಧನಕ್ಕೊಳಗಾದ ಜೆ. ಶೇಖರ್ ರೆಡ್ಡಿಯವರ ಸಹಚರ ಈ ಪಾರ್ಸ್ಮಲ್. ಶೇಖರ್ ರೆಡ್ಡಿ ಮತ್ತಾತನ ಸಹಚರ ಕೆ.ಶ್ರೀನಿವಾಸುಲು ರವರನ್ನು ಬುಧವಾರ ಬಂಧಿಸಿದ್ದರು, ಅಂದು ಸಂಜೆಯೇ ಲೋಧಾ ರವರನ್ನು ಮುಂಬಯಿಯ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದು ನಂತರ ಗುರುವಾರ ಬಂಧಿಸಿದ್ದಾರೆ.

ಲೋಧಾ ಪಿಯರ್ ಲೆಸ್ ಜನರಲ್ ಫೈನಾನ್ಸ್ ಸಂಸ್ಥೆಯ ಬೃಹತ್ ಮೊತ್ತದ ಷೇರುಗಳನ್ನು ಹೊಂದಿದ್ದಾರೆ. 1990 ರಲ್ಲಿ ಭೂಗತದೊರೆ ದಾವೂದ್ ಇಬ್ರಾಹಿಂ ಬದಲಾಗಿ ಕಂಪನಿಯಲ್ಲಿ ಹೆಚ್ಚು ಷೇರುಗಳು ಖರೀದಿಸಲು ಪ್ರಯತ್ನಿಸಿ, ಕಂಪನಿಯ ಚೇರ್ಮನ್ ಪಿ.ಸಿ.ಸೇನ್ ರವರಿಗೆ ಜೀವ ಬೆದರಿಕೆ ಹಾಕಿದ್ದರೆಂಬ ಆರೋಪಗಳು ಲೋಧಾ ಮೇಲಿವೆ.

ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ಹೆಚ್ಚು ಅಂತಸ್ತುಗಳನ್ನು ನಿರ್ಮಾಣ ಮಾಡುತ್ತಾರೆಂಬ ಕಾರಣಕ್ಕಾಗಿ, ಕೋಲ್ಕತಾದಲ್ಲಿ ಲೋಧಾರವರನ್ನು ‘ಎಕ್ಸ್‌ಟ್ರಾ ಫ್ಲೋರ್ಸ್ ಲೋಧಾ’ ಎನ್ನುತ್ತಾರಂತೆ.