ಸಿಎಂ ಆಪ್ತನ ಅಮಾನತು ಹಿಂಪಡೆದ ಕೆಪಿಸಿಸಿ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಮರಿಗೌಡ ರವರ ಅಮಾನತು ಅದೇಶವನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಶುಕ್ರವಾರ ಹಿಂಪಡೆದಿದೆ. ಕೆಪಿಸಿಸಿ ಅಧ್ಯಕ್ಷರ ನಿರ್ದೇಶನದಂತೆ ಮರಿಗೌಡರ ಅಮಾನತನ್ನು ತಕ್ಷಣದಿಂದಲೇ ಹಿಂಪಡೆಯಲಾಗಿದೆ ಎಂದು ಕೆಪಿಸಿಸಿ ಜನರಲ್ ಸೆಕ್ರಟರಿ ಎನ್‌ಎಸ್ ಬೋಸರಾಜು ಹೇಳಿದ್ದಾರೆ.

ಮೈಸೂರು ಮಹಿಳಾ ಜಿಲ್ಲಾಧಿಕಾರಿ ಶಿಖಾ ರವರಿಗೆ ಸಾರ್ವಜನಿಕವಾಗಿ ಧಮಕಿ‌ಹಾಕಿದ ಪ್ರಕರಣ ಗಂಭೀರ ತಿರುವ ಪಡೆದುಕೊಂಡ ನಂತರ ಆಗಸ್ಟ್ 9 ರಂದು ಕೆಪಿಸಿಸಿ ಮರಿಗೌಡ ಅವರನ್ನು ಅಮಾನತುಗೊಳಿಸಿತ್ತು.

ಧಮಕಿ ಹಾಕಿದ ಮರಿಗೌಡ ಅವರ ವಿರುದ್ದ ಜಿಲ್ಲಾಧಿಕಾರಿ ದೂರು ದಾಖಲಿಸಿದ್ದರು. ನಂತರ ಎರಡು ವಾರಗಳ ಕಾಲ ತಲೆ ಮರೆಸಿಕೊಂಡಿದ್ದ ಮರಿಗೌಡ, ನಂತರ ಪೊಲೀಸರೆದುರು ಶರಣಾಗಿದ್ದರು.