ಕುಲಭೂಷಣ್ ಜಾದವ್ ರನ್ನು ತಾಲಿಬಾನ್ ಅಪಹರಿಸಿ ಪಾಕ್‌ಗೆ ಮಾರಿತ್ತು? |News Mirchi

ಕುಲಭೂಷಣ್ ಜಾದವ್ ರನ್ನು ತಾಲಿಬಾನ್ ಅಪಹರಿಸಿ ಪಾಕ್‌ಗೆ ಮಾರಿತ್ತು?

ಗೂಢಚಾರಿಕೆ ಆರೋಪದ ಮೇಲೆ ಪಾಕ್ ಸೇನಾ ನ್ಯಾಯಾಲಯದಿಂದ ಗಲ್ಲು ಶಿಕ್ಷೆಗೆ ಒಳಗಾದ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಯಾದವ್ ಅವರನ್ನು ಪಾಕಿಸ್ತಾನ ಗುಪ್ತಚರ ಅಧಿಕಾರಿಗಳು ಬಂಧಿಸಿಲ್ಲ, ಬದಲಿಗೆ ತಾಲಬಾನ್ ಉಗ್ರರು ಜಾದವ್ ಅವರನ್ನು ಇರಾನ್ ಸ್ವಾಧೀನದಲ್ಲಿರುವ ಬಲೂಚಿಸ್ತಾನದಿಂದ ಅಪಹರಿಸಿ ಪಾಕ್ ಗೆ ಮಾರಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ವಿಷಯವನ್ನು ಪಾಕಿಸ್ತಾನದಲ್ಲಿ ಕೆಲಸ ಮಾಡಿದ್ದ ಜರ್ಮನಿ ರಾಯಭಾರಿ ದೃಢಪಡಿಸಿದ್ದಾರೆ ಎಂದು ಪಾಕಿಸ್ತಾನದ ಡಾನ್ ಪತ್ರಿಕೆ ವರದಿ ಮಾಡಿತ್ತು. ಇರಾನ್ ಭೂಪ್ರದೇಶದಲ್ಲಿ ಇರುವ ತಾಲಿಬಾನ್ ಸ್ಮಗ್ಲರ್ ಗಳ ಮಾಫಿಯಾ ಜಾದವ್ ಅವರನ್ನು ಅಪಹರಣ ಮಾಡಿತ್ತು ಎಂದು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಕಳೆದ ಏಪ್ರಿಲ್ 2 ರಂದು ಹೇಳಿದ್ದರು.

ಕುಲಭೂಷಣ್ ಕಿಡ್ನಾಪ್ ಪ್ರಕರಣದಲ್ಲಿ ಪಾಕ್ ಮಾಜಿ ಸೇನಾಧಿಕಾರಿ ಮೊಹಮದ್ ಹಬೀಬ್ ಜಹೀರ್ ಕೈವಾಡವಿದೆ ಎನ್ನಲಾಗುತ್ತಿದ್ದು, ಆತ ಸದ್ಯ ಭಾರತ – ನೇಪಾಳ ಗಡಿಯಿಂದ ನಾಪತ್ತೆಯಾಗಿದ್ದಾನೆ. ಆತನನ್ನು ಭಾರತದ “ರಾ” ಅಧಿಕಾರಿಗಳು ಬಂಧಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಜಾದವ್ ಅವರಿಗೆ ಪಾಕ್ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದ್ದರ ಹಿನ್ನೆಲೆಯಲ್ಲಿ ಭಾರತ ಜಹೀರ್ ನನ್ನು ಬಂಧಿಸಿದೆ ಎನ್ನಲಾಗುತ್ತಿದೆ.

Loading...
loading...
error: Content is protected !!