ಟಿ20 ಸರಣಿ ಶುಭಾರಂಭ, ಮೊದಲ ಪಂದ್ಯದಲ್ಲಿ ಭಾರತಕ್ಕೆ ಸುಲಭ ಗೆಲುವು – News Mirchi

ಟಿ20 ಸರಣಿ ಶುಭಾರಂಭ, ಮೊದಲ ಪಂದ್ಯದಲ್ಲಿ ಭಾರತಕ್ಕೆ ಸುಲಭ ಗೆಲುವು

ಆಸ್ಟ್ರೇಲಿಯಾ ವಿರುದ್ಧ ಮೂರು ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು ಸುಲಭವಾಗಿ ಜಯಗಳಿಸಿದೆ. ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 18.4 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 118 ಗಳಿಸಿತು. ಮಳೆಯ ಕಾರಣದಿಂದಾಗಿ ಭಾರತಕ್ಕೆ ಗೆಲ್ಲಲು 6 ಓವರ್ ಗಳಲ್ಲಿ 48 ರನ್ ಗಳ ಗುರಿ ನೀಡಲಾಯಿತು.

ನಂತರ ಬ್ಯಾಟ್ ಮಾಡಿದ ಭಾರತ, 5.3 ಓವರ್ ಗಳಲ್ಲಿ ಒಂದು ವಿಕೆಟ್ ಮಾತ್ರ ಕಳೆದುಕೊಂಡು ಗೆಲುವು ಸಾಧಿಸಿತು. ಕೊಹ್ಲಿ (22 ಅಜೇಯ, 14 ಎಸೆತ, 3 ಫೋರ್), ಧವನ್ (15 ಅಜೇಯ, 12 ಎಸೆತ, 3 ಫೋರ್) ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಎರಡನೇ ಟಿ20 ಮಂಗಳವಾರ ಗುವಾಹತಿಯಲ್ಲಿ ನಡೆಯಲಿದೆ.

ಆಸ್ಟ್ರೇಲಿಯಾ ಇನ್ನಿಂಗ್ಸ್: ವಾರ್ನರ್ (ಬೌ) ಭುವನೇಶ್ವರ್ 8; ಫಿಂಚ್ (ಬಿ) ಕುಲ್ದೀಪ್ 42; ಮ್ಯಾಕ್ಸ್ವೆಲ್ (ಸಿ) ಬುಮ್ರಾ (ಬಿ) ಚಾಹಲ್ 17; ಹೆಡ್ (ಬಿ) ಪಾಂಡ್ಯಾ 9; ಹೆನ್ರಿಕ್ಸ್ (ಬಿ) ಕುಲ್ದೀಪ್ 8; ಕ್ರಿಸ್ಟಿಯನ್ ರನೌಟ್ 9; ಪೈನ್ (ಬೌ) ಬುಮ್ರಾ 17; ಕೌಲ್ಟರ್ ನೈಲ್ (ಬಿ) ಬುಮ್ರಾ 1; ಟೈ ನಾಟ್ ಔಟ್ 0; ಜಂಪಾ ನಾಟ್ ಔಟ್ 4; ಎಕ್ಸ್ಟ್ರಾ 3, ಒಟ್ಟು: (18.4 ಓವರ್ಗಳಲ್ಲಿ 8 ವಿಕೆಟ್) 118;

ಭಾರತದ ಇನ್ನಿಂಗ್ಸ್: ರೋಹಿತ್ (ಬಿ) ಕೌಲ್ಟರ್ ನೈಲ್ 11; ಧವನ್ ಅಜೇಯ 15; ಕೊಹ್ಲಿ ಅಜೇಯ 22; ಎಕ್ಸ್’ಟ್ರಾ 1, ಒಟ್ಟು: (5.3 ಓವರ್ ಗಳಲ್ಲಿ 1 ವಿಕೆಟ್ ನಷ್ಟ) 49;

Get Latest updates on WhatsApp. Send ‘Add Me’ to 8550851559

Loading...