ಕತ್ತೆ ರಾಷ್ಟ್ರೀಯ ಪ್ರಾಣಿಯಾಗಲಿ ಎಂದ ಸಾಹಿತಿ ಯಾರು ಗೊತ್ತೇ?

ಸಾಹಿತಿ ಕುಂ.ವೀರಭದ್ರಪ್ಪನವರಿಗೆ ಯಾಕೋ ಕತ್ತೆಯ ಮೇಲೆ ಮಮಕಾರ ಹೆಚ್ಚಾಗಿದೆ. ಅದು ಶ್ರಮಜೀವಿ ಎಂಬ ಕಾರಣಕ್ಕೆ ಕತ್ತೆಯ ಮೇಲೆ ಪ್ರೀತಿಯೋ, ಗೋವಿನ ಪರ ಮಾತನಾಡುವವರನ್ನು ಕಿಚಾಯಿಸಲೋ, ಅಂತೂ ತಮ್ಮ ಮಾತಿನಲ್ಲಿ ಕತ್ತೆಯ ಮೇಲೆ ಅಪಾರ ಪ್ರೀತಿ ಹರಿಸಿದ್ದಾರೆ. ಗೋವಿನ ಹಾಲಿಗಿಂತ ಕತ್ತೆ ಹಾಲಿನಲ್ಲಿ ಹೆಚ್ಚು ಪೋಷಕಾಂಶಗಳಿವೆ, ಗೋವನ್ನು ರಾಷ್ಟ್ರ ಪ್ರಾಣಿ ಮಾಡಲು ಒಬ್ಬರು ಹೇಳುತ್ತಿದ್ದಾರೆ, ಆದರೆ ಶ್ರಮ ಸಂಸ್ಕೃತಿಯ ರೂಪವಾದ ಕತ್ತೆಯನ್ನೇಕೆ ರಾಷ್ಟ್ರ ಪ್ರಾಣಿಯನ್ನಾಗಿ ಮಾಡಬಾರದು ಎಂದು ಪ್ರಶ್ನಿಸಿದ್ದಾರೆ.

ಇದೇ ಸಂದರ್ಭದಲ್ಲಿ ಎಸ್.ಎಲ್.ಭೈರಪ್ಪ ಅವರು ಶ್ರೇಷ್ಟ ಕಾದಂಬರಿಕಾರರಲ್ಲ, ಎಂದು ಕುಂ.ವೀರಭದ್ರಪ್ಪ ಜರೆದಿದ್ದಾರೆ. ಭೈರಪ್ಪನವರ ಕಾದಂಬರಿಗಳು ಸನಾತನ ಧರ್ಮ ಪ್ರಚಾರದ ಕರಪತ್ರಗಳ ಹಾಗಿವೆ ಎಂದು ಅವರು ಹೇಳಿದ್ದಾರೆ. ರಾಜಕಾರಣಿಗಳ ಬಗ್ಗೆ ಟೀಕಿಸುವ ಭೈರಪ್ಪನವರು ಮೋದಿ ಜೊತೆ ಗುರುತಿಸಿಕೊಳ್ಳುತ್ತಾರೆ ಎಂದು ಆರೋಪಿಸಿದರು.

ಸಾಹಿತಿಗಳು ಮತ್ತು ರಾಜಕಾರಣಿಗಳು ದೇಶವನ್ನು ಒಡೆದಷ್ಟು ಯಾರೂ ಒಡೆದಿಲ್ಲ ಎಂದು ಹೇಳುವ ಅವರ ಕಾದಂಬರಿಗಳಲ್ಲೇ ಒಡಕು ಹುಟ್ಟಿಸುವ ವಿಷಯಗಳಿವೆ ಎಂದು ಹೇಳಿದ್ದಾರೆ. ಭೈರಪ್ಪನವರು ಶ್ರೇಷ್ಟರಲ್ಲದಿದ್ದರೂ, ಕಳಪೆ ಲೇಖಕರಂತೂ ಅಲ್ಲ, ಹಾಗಾಗಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ಕೊಟ್ಟರೆ ಸಂತೋಷ ಎಂದು ವ್ಯಂಗ್ಯ ಮಾಡಿದ್ದಾರೆ.