ಆಮ್ ಆದ್ಮಿ ಕುಮಾರ್ ವಿಶ್ವಾಸ್ ಬಿಜೆಪಿ ಪಾಳೆಯಕ್ಕೆ!

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ತಮ್ಮ ಸ್ವಂತ ಪಕ್ಷದ ನಾಯಕ ಕುಮಾರ್ ವಿಶ್ವಾಸ್ ಶಾಕ್ ನೀಡಲಿದ್ದಾರೆ. ಆಮ್ ಆದ್ಮಿ ಪಕ್ಷದ ಅತ್ಯಂತ ನಂಬುಗೆಯ ನಾಯಕ ಶೀಘ್ರದಲ್ಲಿಯೇ ಕಮಲ ಪಾಳೆಯಕ್ಕೆ ಜಿಗಿಯಲಿದ್ದಾರೆ. ಈಗಾಗಲೇ ಕುಮಾರ್ ವಿಶ್ವಾಸ್ ಮತ್ತು ಬಿಜೆಪಿ ನಡುವೆ ಚರ್ಚೆ ನಡೆಯುತ್ತಿದ್ದು, ಯಾವುದೇ ಕ್ಷಣದಲ್ಲಿ ಬಿಜೆಪಿ ಸೇರ್ಪಡೆ ಕುರಿತು ಕುಮಾರ್ ಘೋಷಿಸಲಿದ್ದಾರೆ ಎನ್ನಲಾಗುತ್ತಿದೆ.

ಉತ್ತರಪ್ರದೇಶ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ತನಗೆ ಅವಕಾಶ ನೀಡಿ ಎಂದು ಬಿಜೆಪಿಯನ್ನು ಅವರು ಕೋರಿದ್ದಾರೆ. ವಿಶ್ವಾಸ್ ಅವರೊಂದಿಗೆ ಚರ್ಚೆ ಈಗಾಗಲೇ ಬಹುದೂರ ಸಾಗಿದ್ದು, ಈ ಕುರಿತು ತೀರ್ಮಾನ ಶೀಘ್ರದಲ್ಲೇ ಹೊರಬೀಳಲಿದೆ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ.

ಶೀಘ್ರದಲ್ಲೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರನ್ನು ಕುಮಾರ್ ಭೇಟಿಯಾಗುವ ಸಾಧ್ಯತೆ ಇದೆ. ಈ ಹಿಂದೆ ಕುಮಾರ್ ವಿಶ್ವಾಸ್ ಆಮ್ ಆದ್ಮಿ ಪಕ್ಷದ ಪರವಾಗಿ ಸ್ಮೃತಿ ಇರಾನಿ ಹಾಗೂ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸಿದ್ದರು.

Aam Aadmi Party leaderKumar Vishwas is reportedly in talks with BJP to join the party and a call will be taken in a day or two after a consensus is reached between him and the saffron party on where he would be fielded from in the ensuing Assembly elections in Uttar Pradesh.

Related News

loading...
Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache