ಮದುವೆಗೆ ಬರುವಂತೆ ಧರಣಿ ಕುಳಿತಿದ್ದ ಅಭಿಮಾನಿ ಮನೆಗೆ ಭೇಟಿ ನೀಡಿದ ಹೆಚ್ಡಿಕೆ

ಮಂಡ್ಯ: ತನ್ನ ಮದುವೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರ ಸ್ವಾಮಿಯವರು ಬಂದು ಆಶೀರ್ವದಿಸಲೇಬೇಕೆಂದು ಧರಣಿ ಕುಳಿತಿದ್ದ ವ್ಯಕ್ತಿಯ ಮನೆಗೆ ಕೊಟ್ಟ ಭರವಸೆಯಂತೆ ಕುಮಾರಸ್ವಾಮಿ ಭೇಟಿ ನೀಡಿದ್ದಾರೆ. ಮದುವೆಗೆ ಹಾಜರಾಗಲು ಸಾಧ್ಯವಿಲ್ಲ, ಮದುವೆಯ ನಂತರ ಮನೆಗೆ ಬರುವುದಾಗಿ ಈ ಹಿಂದೆ ಕುಮಾರಸ್ವಾಮಿ ಯುವಕನಿಗೆ ಭರವಸೆ ನೀಡಿದ್ದರು.

ಮದುವೆಗೆ ಆಗಮಿಸುವಂತೆ ಕುಮಾರಸ್ವಾಮಿಯವರಿಗೆ ಮದ್ದೂರು ತಾಲ್ಲೂಕಿನ ಕೊಕ್ಕರೆ ಬೆಳ್ಳೂರು ನಿವಾಸಿ ರವಿ ಎಂಬ ಯುವಕ ಆಹ್ವಾನ ಪತ್ರ ಕಳುಹಿಸಿದ್ದರು.

ಆದರೆ ಗ್ರಾಮದ ಮುಖಂಡರೊಬ್ಬರು ಕುಮಾರಸ್ವಾಮಿಯವರನ್ನು ಕರೆತರಲು ನಿರ್ಲಕ್ಷ್ಯವಹಿಸಿದ್ದಾರೆ ಎಂದು ಆರೋಪಿಸಿದ್ದ ಯುವಕ ಧರಣಿ ಕೂತಿದ್ದರು. ಈ ವಿಷಯ ತಿಳಿದ ಕುಮಾರ ಸ್ವಾಮಿಯವರು, ಯುವಕನಿಗೆ ದೂರವಾಣಿ ಕರೆ ಮಾಡಿ ಮದುವೆಯ ನಂತರ ಬರುವುದಾಗಿ ಮನವೊಲಿಸಿದ್ದರು. ಕೊಟ್ಟ ಭರವಸೆಯಂತೆ ನವವಿವಾಹಿತನ ಮನೆಗೆ ಭೇಟಿ ಕೊಟ್ಟು ಅಭಿಮಾನಿಯ ಬಯಕೆ ಈಡೇರಿಸಿದ್ದಾರೆ.

Get Latest updates on WhatsApp. Send ‘Subscribe’ to 8550851559