ಚಿತ್ರ ಕೃಪೆ : ಟಿವಿ9

ನ್ಯಾಯಕ್ಕಾಗಿ ಟವರ್ ಏರಿದ ರೈತ, ಕುಮಾರಸ್ವಾಮಿ ಮನವೊಲಿಕೆ

ಬೆಳಗಾವಿ: ಕಬ್ಬು ಬೆಳೆಗೆ ವೈಜ್ಞಾನಿಕ ಬೆಲೆ ಘೋಷಿಸುವಂತೆ ಒತ್ತಾಯಿಸಿ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲುಕಿನ ರೈತ ಚಂದ್ರು ಎಂಬುವವರು ಮೊಬೈಲ್ ಟವರ್ ಏರಿದ್ದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿಯ ಸುವರ್ಣ ಸೌಧ ಬಳಿ ಇರುವ ಮೊಬೈಲ್ ಟವರ್ ಏರಿರುವ ರೈತ, ಕಾಗೆ ಕೂತಿದ್ದಕ್ಕೆ ಕಾರು ಬದಲಾಯಿಸುವ ಮುಖ್ಯಮಂತ್ರಿಗಳಿಗೆ ರೈತರ ಸಮಸ್ಯೆಗಳು ಕಾಣಿಸುತ್ತಿಲ್ಲವೆ ಎಂದು ಟವರ್ ಮೇಲಿಂದಲೇ ಪ್ರಶ್ನಿಸಿದ್ದಾನೆ. ಹಲವರು ಕೆಳಗಿಳಿಯುವಂತೆ ಮನವೊಲಿಸಿದರೂ ಆತ ಯಾರ ಮಾತಿಗೂ ಕಿವಿಗೊಡಲಿಲ್ಲ.

ಸ್ಥಳಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ, ರೈತನ ಮನವೊಲಿಸುವ ಕೆಲಸ ಮಾಡಿದ್ದಾರೆ. ನಿನ್ನ ಸಮಸ್ಯೆ ಏನಿದೆಯೋ ಬಗೆಹರಿಸೋಣ ಬಾ ಎಂದು ಕುಮಾರಸ್ವಾಮಿ ರೈತನ ಮನವೊಲಿಸಿದ್ದು, ಇದೀಗ ರೈತ ಟವರ್ ನಿಂದ ಕೆಳಗಿಳಿದಿದ್ದಾನೆ.