ಸುಷ್ಮಾ ಮನವಿಗೆ ಸ್ಪಂದಿಸಿದ ಕುವೈತ್ ದೊರೆ, 15 ಭಾರತೀಯರ ಮರಣದಂಡನೆ ರದ್ದು – News Mirchi

ಸುಷ್ಮಾ ಮನವಿಗೆ ಸ್ಪಂದಿಸಿದ ಕುವೈತ್ ದೊರೆ, 15 ಭಾರತೀಯರ ಮರಣದಂಡನೆ ರದ್ದು

ಷರಿಯತ್ ಕಾನೂನುಗಳ ಪ್ರಕಾರ ಕಠಿಣ ಶಿಕ್ಷೆಗಳನ್ನು ಜಾರಿ ಮಾಡುವ ಅರಬ್ ದೇಶ ಕುವೈತ್ ನಲ್ಲಿ ಕ್ಷಮಾದಾನ ಎಂಬುದು ತುಂಬಾ ಅಪರೂಪ. ಅಂತಹ ದೇಶದಲ್ಲಿ 15 ಜನ ಭಾರತೀಯರಿಗೆ ಮರಣದಂಡನೆ ರದ್ದು ಮಾಡಿ ಆದೇಶಿಸಿದ್ದಾರೆ ಅಲ್ಲಿನ ದೊರೆ ಜೇಬರ್ ಅಲ್ ಅಹಮದ್ ಅಲ್ ಸಭಾ. ಭಾರತದ ವಿದೇಶಾಂಗ ಸಚಿವೆ ಮನವಿಯನ್ನು ಅಂಗೀಕರಿಸಿರುವ ಕುವೈತ್ ದೊರೆ, 15 ಜನ ಭಾರತೀಯ ಮರಣದಂಡನೆಯನ್ನು ರದ್ದು ಮಾಡಿ ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿದ್ದಾರೆ.

15 ಭಾರತೀಯರ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿರುವುದಲ್ಲದೆ, ಇನ್ನೂ 119 ಭಾರತೀಯ ಖೈದಿಗಳ ಶಿಕ್ಷಾವಧಿಯನ್ನು ಕೂಡಾ ಕಡಿಮೆ ಮಾಡಿದ್ದಾರೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದು, ಇದಕ್ಕಾಗಿ ಕುವೈತ್ ದೊರೆಗೆ ಧನ್ಯವಾದಗಳನ್ನು ಹೇಳಿದ್ದಾರೆ.

ಕುವೈತ್ ದೊರೆ ಆದೇಶದಿಂದ ಜೈಲಿನಿಂದ ಬಿಡುಗಡೆಯಾಗಲಿರುವ ಭಾರತೀಯ ಖೈದಿಗಳ ವಿಷಯದಲ್ಲಿ ಅಲ್ಲಿನ ಭಾರತೀಯ ರಾಯಭಾರಿ ಕಛೇರಿ ಸಂಪೂರ್ಣ ಸಹಕಾರ ನೀಡುತ್ತದೆ ಎಂದು ಸುಷ್ಮಾ ಸ್ವರಾಜ್ ಹೇಳಿದ್ದಾರೆ.

 

Get Latest updates on WhatsApp. Send ‘Add Me’ to 8550851559

Loading...