ಮುರುಗಮಲೆ: ಕಾರು ಹರಿದು ಲಕ್ಷದೀಪೋತ್ಸವಕ್ಕೆ ಬಂದಿದ್ದ ಸಹೋದರಿಯರ ಸಾವು

ಚಿಂತಾಮಣಿ ತಾಲ್ಲೂಕಿನ ಮುರಗಮಲ್ಲಾದಲ್ಲಿನ ಮುಕ್ತೀಶ್ವರ ಬೆಟ್ಟದಲ್ಲಿ ಕಾರು ಹರಿದು ಇಬ್ಬರು ಸಹೋದರಿಯರು ಸಾವನ್ನಪ್ಪಿದ್ದು, ತಾಯಿ ಗಾಯಗೊಂಡಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.

ಲಕ್ಷ ದೀಪೋತ್ಸವ ಕಣ್ತುಂಬಿಕೊಳ್ಳಲು ಮುಕ್ತೀಶ್ವರ ಬೆಟ್ಟಕ್ಕೆ ತಾಯಿಯೊಂದಿಗೆ ಆಗಮಿಸಿದ್ದ ಬಯ್ಯನಹಳ್ಳಿ ನಿವಾಸಿಗಳಾದ ಛಾಯಾ ಮತ್ತು ರಕ್ಷಿತ ಎಂಬ ಸಹೋದರಿಯರು, ಬೆಟ್ಟ ಇಳಿದು ಬರುವ ಸಮಯದಲ್ಲಿ ಕಾರು ಹರಿದು ಸಾವನ್ನಪ್ಪಿದ್ದಾರೆ‌. ತಾಯಿ ಭಾಗ್ಯಮ್ಮ ಗಾಯಗೊಂಡಿದ್ದಾರೆ. ಅಪಘಾತದ ನಂತರ ಕಾರಿನ ಚಾಲಕ ಸ್ಥಳದಲ್ಲಿಯೇ ಕಾರು ಬಿಟ್ಟು ಪರಾರಿಯಾಗಿದ್ದಾನೆ.

ಘಟನೆಗೆ ಸಂಬಂಧಿಸಿದಂತೆ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.