ಲಲಿತ ಕಲಾ ಟ್ರಸ್ಟ್ ನ ಸಂಗೀತೋತ್ಸವಕ್ಕೆ ತೆರೆ

ಚಿಂತಾಮಣಿ, ಫೆ.14 : ನಗರದ ಶ್ರೀ ನಾಗನಾಥೇಶ್ವರಿ ಲಲಿತ ಕಲಾ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಶ್ರೀ ತ್ಯಾಗರಾಜರ, ಪುರಂದರದಾಸರ, ಕನಕದಾಸರ ಮತ್ತು ಶ್ರೀ ಯೋಗಿನಾರೇಯಣ ಯತೀಂದ್ರರ ಆರಾಧನಾ ಮಹೋತ್ಸವದ ಅಂಗವಾಗಿ ಎರಡು ದಿನಗಳ ಕಾಲ ಅಂಜನಿ ಬಡಾವಣೆಯಲ್ಲಿ ನಡೆದ ಸಂಗೀತೋತ್ಸಕ್ಕೆ ತೆರೆ ಬಿದ್ದಿದೆ.

ಕಾರ್ಯಕ್ರಮದಲ್ಲಿ ಸ್ಥಳೀಯ ಮತ್ತು ಆಕಾಶವಾಣಿ ಕಲಾವಿದರನ್ನು ಒಳಗೊಂಡಂತೆ ಹಲವಾರು ಹಿರಿಯ ಸಂಗೀತ ವಿದ್ವಾಂಸರು ಬಂದು ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ನಾಗನಾಥೇಶ್ವರಿ ಲಲಿತಾ ಕಲಾ ಟ್ರಸ್ಟ್ ನಲ್ಲಿ ಸಂಗೀತವನ್ನು ಅಭ್ಯಾಸ ಮಾಡುತ್ತಿರುವ ಹಲವಾರು ಮಕ್ಕಳು ಕಾರ್ಯಕ್ರಮವನ್ನು ನೀಡಿ ಸಂಗೀತಾಭಿಮಾನಿಗಳನ್ನು ತಣಿಸಿದರು.

ಕಣ್ಸನ್ನೆ ಚೆಲುವೆ ಪ್ರಿಯಾ ವಾರಿಯರ್ ನಟನೆಯ ಹಾಡಿನ ವಿರುದ್ಧ ದೂರು

ಸಂಸ್ಥೆಯ ಅಧ್ಯಕ್ಷರೂ, ಅಂಧ ಕಲಾವಿದರೂ ಆಗಿರುವ ಸಂಗೀತ ವಿದ್ವಾನ್ ಅಶೋಕ್ ರವರ ಸಂಗೀತ ಕಛೇರಿ ಕೇಳುಗರ ಮನ ಸೆಳೆಯಿತು. ಇವರಿಗೆ ಪಕ್ಕವಾದ್ಯದಲ್ಲಿ ವಿದ್ವಾನ್ ಜಿ.ಎನ್.ಶ್ಯಾಮಸುಂದರ್ ಪಿಟೀಲಿನಲ್ಲಿ, ವಿದ್ವಾನ್ ಚಿಂತಲಪಲ್ಲಿ ಸೋಮಶೇಖರ್ ಮೃದಂಗದಲ್ಲಿ ಸಹಕಾರ ನೀಡಿದರು.

ಎರಡು ದಿನಗಳ ಕಾಲ ನಡೆದ ಸಂಗೀತೋತ್ಸವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಿಕತ್ವದಲ್ಲಿ ವಿದ್ವಾನ್ ಹಿರಣ್ಯಪಲ್ಲಿ ಆಶೋಕ್ ರವರು ಮೊದಲನೇ ದಿನ ಮತ್ತು ವಿದ್ವಾನ್ ಎಂ.ಕೌಶಿಕ್ ರವರು ಎರಡನೇ ದಿನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.


ಚಿಂತಾಮಣಿ ನಗರದ ವಿದ್ಯಾಗಣಪತಿ ರಂಗಮಂದಿರದಲ್ಲಿ ನಡೆಯುತ್ತಿದ್ದ ಸಂಗೀತೋತ್ಸವದ ಕೊನೆಯ ದಿನದಂದು ಸಂಸ್ಥೆಯ ಅಧ್ಯಕ್ಷರು, ಅಂಧ ಕಲಾವಿದರೂ ಆಗಿರುವ ಸಂಗೀತ ವಿದ್ವಾನ್ ಅಶೋಕ್ ರವರ ಸಂಗೀತ ಕಛೇರಿ ಕೇಳುಗರ ಮನ ಸೆಳೆಯಿತು.

ಸಂಗೀತೋತ್ಸವದಲ್ಲಿ ವಿದ್ವಾನ್ ಎಂ.ಕೌಶಿಕ್ ರವರು ಕಾರ್ಯಕ್ರಮ ನಡೆಸಿಕೊಟ್ಟರು.

Get Latest updates on WhatsApp. Send ‘Subscribe’ to 8550851559