ವಿದೇಶಿ ಪ್ರಜೆಯೆಂಬ ಕಾರಣಕ್ಕೆ ವಿಶೇಷವಾಗಿ ಪರಿಗಣಿಸಬೇಕಿಲ್ಲ : ಸುಪ್ರೀಂ

ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಬ್ರಿಟೀಷ್ ಪ್ರಜೆಯೊಬ್ಬರಿಗೆ ಪಂಜಾಬ್ ಹರಿಯಾಣ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. ವಿದೇಶಿ ಪ್ರಜೆಯೆಂಬ ಮಾತ್ರಕ್ಕೆ ಅವರನ್ನು ವಿಶೇಷವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿರುವ ಸುಪ್ರೀಂ ಕೋರ್ಟ್, 2015 ರಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣದ ಆರೋಪಿಗಳಾದ ಬ್ರಿಟೀಷ್ ಪ್ರಜೆ ಹಾಗೂ ಮತ್ತಿಬ್ಬರು ಆರೋಪಿಗಳಿಗೆ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶವನ್ನು ತಳ್ಳಿ ಹಾಕಿದೆ.

ಪ್ರಕರಣದ ವಿಚಾರಣೆ ನಡೆಸಿದ ಎನ್.ವಿ.ರಮಣ ಮತ್ತು ಎಸ್.ಎ ನಜೀರ್ ಅವರ ನ್ಯಾಯಪೀಠ, ಬ್ರಿಟೀಷ್ ಪ್ರಜೆ ರೇಷಮ್ ಚಂದ್ ಕಾಲೇರ್ ಹಾಗೂ ಇನ್ನಿಬ್ಬರ ಮೇಲೆ ಅಪರಾಧ ಕೃತ್ಯದಲ್ಲಿ ತೊಡಗಿರುವ ಆರೋಪಗಳಿವೆ. ಅವರಲ್ಲಿ ಮೊದಲ ಆರೋಪಿಯಾಗಿರುವ ಕಾಲೇರ್ ಅವರನ್ನು ವಿದೇಶಿ ಪ್ರಜೆಯೆಂಬ ಕಾರಣಕ್ಕೆ ವಿಶೇಷವಾಗಿ ಪರಿಗಣಿಸಲು ಸಾಧ್ಯವಿಲ್ಲವೆಂದು ಹೇಳಿದೆ. ಕಾನೂನು ದೃಷ್ಟಿಯಲ್ಲಿ ಪ್ರತಿಯೊಬ್ಬರೂ ರಾಷ್ಟ್ರೀಯತೆಯ ಹೊರತಾಗಿಯೂ ಒಂದೇ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

ಕೆಳ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ತಿರಸ್ಕೃತಗೊಂಡ ನಂತರ ಕಾಲೇರ್ ಹೈಕೋರ್ಟ್ ಮೊರೆ ಹೋಗಿದ್ದ. ಹೈಕೋರ್ಟಿನಲ್ಲಿ ಆತನಿಗೆ ಜಾಮೀನು ಮಂಜೂರಾಗಿತ್ತು. ಆದರೆ ಈ ಪ್ರಕರಣದಲ್ಲಿ ದೂರುದಾರರು ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಸುಪ್ರೀಂ ಮೊರೆ ಹೋಗಿದ್ದರು.

Get Latest updates on WhatsApp. Send ‘Subscribe’ to 8550851559