ರೆಡ್ಮಿ ನೋಟ್-5 ಸ್ಪೆಸಿಫಿಕೇಷನ್ಸ್ ಇವೇ... |News Mirchi

ರೆಡ್ಮಿ ನೋಟ್-5 ಸ್ಪೆಸಿಫಿಕೇಷನ್ಸ್ ಇವೇ…

ಬಡ್ಜೆಟ್ ಸ್ಮಾರ್ಟ್ ಫೋನ್ ಗಳಿಂದ ಜಿಯೋಮಿ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸುತ್ತಿರುವುದು ತಿಳಿದಿರುವ ವಿಷಯವೇ. ರೆಡ್ಮಿ ನೋಟ್4 ಯಶಸ್ವಿಯಾದ ಹಿನ್ನೆಲೆಯಲ್ಲಿ, ಮತ್ತೊಂದು ಬಡ್ಜೆಟ್ ಸ್ಮಾರ್ಟ್ ಫೋನ್ ರೆಡ್ಮಿ ನೋಟ್-5 ಹೊರತರುತ್ತಿದೆ.

ಸದ್ಯ ಈ ಸ್ಮಾರ್ಟ್ ಫೋನ್ ಪೂರ್ಣ ವಿವರಗಳು ಆನ್ಲೈನ್ ನಲ್ಲಿ ಲೀಕ್ ಆಗಿವೆ. ಒರಿಜಿನಲ್ ರೆಡ್ಮಿ ನೋಟ್4 ನಂತೆಯೇ ಇದು ಫುಲ್ ಮೆಟಲ್ ಬಾಡಿ ಹೊಂದಿರುತ್ತದೆ ಎನ್ನಲಾಗುತ್ತಿದೆ. ಆದರೆ ಈ ಬಾರಿ ಬಿಡುಗಡೆಯಾಗಲಿರುವ ಮಾದರಿಯಲ್ಲಿ ಫಿಂಗ್ ಪ್ರಿಂಟ್ ಸ್ಕ್ಯಾನರ್ ನಲ್ಲಿ ಸ್ವಲ್ಪ ಬದಲಾವಣೆಗಳನ್ನು ಕಾಣಬಹುದು. ರೆಡ್ಮಿ ನೋಟ್-4 ಗೆ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಹಿಂಬದಿಯಲ್ಲಿದ್ದರೆ, ಈ ಫೋನ್ ನಲ್ಲಿ ಅದು ಮುಂಭಾಗದಲ್ಲಿ ಇರಲಿದೆಯಂತೆ.

ಬಹಿರಂಗವಾದ ಮಾಹಿತಿಗಳ ಪ್ರಕಾರ ನೋಟ್-5 ಸ್ಮಾರ್ಟ್ ಫೋನ್ 5.5 ಇಂಚಿನ ಡಿಸ್ ಪ್ಲೇ ಜತೆಗೆ, ಕ್ವಾಲ್ ಕಾಮ್ ಸ್ನಾಪ್ ಡ್ರ್ಯಾಗನ್ 630 ಪ್ರೊಸೆಸರ್ ಹೊಂದಿದೆ. 3ಜಿಬಿ/4ಜಿಬಿ ರ್ಯಾಮ್, 32/64 ಜಿಬಿ ಇಂಟರ್ನಲ್ ಸ್ಟೋರೇಜ್, 16 ಎಂ.ಪಿ ಹಿಂಬದಿ ಕ್ಯಾಮೆರಾ, 13 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ, ಚಾರ್ಜಿಂಗ್ ಗಾಗಿ ಯುಎಸ್ಬಿ ಟೈಪ್-ಸಿ, ಬ್ಲೂಟೂತ್ 5.0 ಕನೆಕ್ಟಿವಿಟಿ, 3,790 ಎಂ.ಎ.ಹೆಚ್ ಬ್ಯಾಟರಿ ಸಾಮರ್ಥ್ಯ ಇದರ ವೈಶಿಷ್ಟ್ಯಗಳು.

ಎಂ.ಐ.ಯು.ಐ ಆಧಾರಿತ ಆಂಡ್ರಾಯ್ಡ್ 7.1.1 ನೌಗಟ್ ಆಪರೇಟಿಂಗ್ ಸಿಸ್ಟಮ್ ನಿಂದ ಇದು ಕೆಲಸ ಮಾಡಲಿದೆ ಎನ್ನಲಾಗುತ್ತಿದೆ. ಬೆಲೆ ಎಷ್ಟಿರಬಹುದು ಎಂಬುದರ ಬಗ್ಗೆ ಮಾಹಿತಿ ಇಲ್ಲ.

Loading...
loading...
error: Content is protected !!