ಐರ್ಲೆಂಡ್ ಪ್ರಧಾನಿಯಾಗಿ ಭಾರತೀಯ ಮೂಲದ ವ್ಯಕ್ತಿ – News Mirchi

ಐರ್ಲೆಂಡ್ ಪ್ರಧಾನಿಯಾಗಿ ಭಾರತೀಯ ಮೂಲದ ವ್ಯಕ್ತಿ

ಐರ್ಲೆಂಡ್ ನ ಮುಂದಿನ ಪ್ರಧಾನಿಯಾಗಿ ಭಾರತೀಯ ಮೂಲದ ಲಿಯೋ ವಾರಡ್ಕರ್(38) ಆಯ್ಕೆಯಾಗಿದ್ದಾರೆ. ಐರ್ಲೆಂಡ್ ಪ್ರಧಾನಿಯಾಗಿ ಆಯ್ಕೆಯಾದ ಅತಿ ಸಣ್ಣ ವಯಸ್ಸಿನ ಮತ್ತು ಪ್ರಥಮ ಸಲಿಂಗಿ ಪ್ರಧಾನಿ ಎಂಬ ದಾಖಲೆ ಸೃಷ್ಟಿಸಿದ್ದಾರೆ ಲಿಯೋ.

ಪ್ರಧಾನಿ ಹುದ್ದೆಗೆ ಪಕ್ಷದ ಹಿರಿಯ ನಾಯಕ ಸಿಮನ್ ಕೋವೆನೀ, ವಾರಡ್ಕರ್ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದ್ದು. ಪ್ರಧಾನಿಯಾಗಿ ಆಯ್ಕೆಯಾದ ಕುರಿತು ಹರ್ಷ ವ್ಯಕ್ತಪಡಿಸಿದ ವಾರಡ್ಕರ್, ನಾನು ಅರ್ಧ ಭಾರತೀಯ, ವೈದ್ಯ ಮತ್ತು ಗೇ ರಾಜಕಾರಣಿ ಮಾತ್ರವಲ್ಲ, ನನಗೂ ಒಂದು ವಿಶೇಷ ಐಡೆಂಟಿಟಿ ಇದೆ ಎಂದು ಹೇಳಿದರು. ಜೂನ್ 13 ರಂದು ನಡೆಯಲಿರುವ ಸಂಸತ್ ಅಧಿವೇಶನದಲ್ಲಿ ಅವರು ಅಧಿಕೃತವಾಗಿ ಪ್ರಧಾನಿಯಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ಲಿಯೋ ವಾರಡ್ಕರ್ ರವರದ್ದು ಮುಂಬೈ ಮೂಲದ ಹಿಂದೂ ಕುಟುಂಬ. ಮರಾಠಿಯವರಾದ ಡಾ. ಅಶೋಕ್ ವಾರಡ್ಕರ್, ಐರಿಷ್ ನರ್ಸ್ ಮೀರಿಯಮ್ ಮೂರನೇ ಮಗನೇ ಲಿಯೋ. 66 ಲಕ್ಷ ಜನಸಂಖ್ಯೆ ಇರುವ ದೇಶದಲ್ಲಿ ಪ್ರಧಾನಿ ಹುದ್ದೆಗೆ ಏಷ್ಯಾ ಮೂಲದ ಸಲಿಂಗಿ ವ್ಯಕ್ತಿಯನ್ನು ಆಯ್ಕೆ ಮಾಡುವುದು ಹತ್ತು ವರ್ಷಗಳ ಹಿಂದೆಯಾಗಿದ್ದಿದ್ದರೆ ಆಗದ ಮಾತಾಗಿತ್ತು.

Loading...