ತಾಯಿಯ ಮಾತಿಗೆ ಓಗೊಟ್ಟು ಶರಣಾದ ಉಗ್ರ – News Mirchi
ಸಾಂದರ್ಭಿಕ ಚಿತ್ರ

ತಾಯಿಯ ಮಾತಿಗೆ ಓಗೊಟ್ಟು ಶರಣಾದ ಉಗ್ರ

ಕಾಶ್ಮೀರ: ಉಗ್ರನಾಗಿ ಬದಲಾಗಿ ಕಳೆದ ಮೇ ತಿಂಗಳಿನಲ್ಲಿ ಪಾಕ್ ನ ಲಷ್ಕರೆ ತಯ್ಬಾ ಭಯೋತ್ಪಾದಕ ಸಂಘಟನೆ ಸೇರಿದ್ದ ಯುವಕ ತಾಯಿಯ ಮನವೊಲಿಕೆಯ ನಂತರ ಭದ್ರತಾ ಪಡೆಗಳಿಗೆ ಶರಣಾಗಿದ್ದಾನೆ. ಕಾಶ್ಮೀರದಲ್ಲಿ ಈ ಘಟನೆ ನಡೆದಿದೆ.

ಗುರುವಾರ ರಾತ್ರಿ ಸೊಪೋರ್ ಪ್ರಾಂತ್ಯದ ಮನೆಯೊಂದರಲ್ಲಿ ಉಗ್ರನೊಬ್ಬನಿದ್ದಾನೆ ಎಂಬ ಗುಪ್ತಚರ ಮೂಲಗಳ ಮಾಹಿತಿಯಿಂದಾಗಿ ಸೇನೆ, ಇತರ ಭದ್ರತಾ ಪಡೆಗಳೊಂದಿಗೆ ಆ ಮನೆಯನ್ನು ಸುತ್ತುವರೆದಿತ್ತು. ಆ ಮನೆಯಲ್ಲಿ ಅಡಗಿದ್ದ ಉಗ್ರ ಕಾಶ್ಮೀರದ ಉಜ್ಜರ್ ನ ಉಮರ್ ಖಲಿಕ್ ಮೀರ್ ಅಲಿಯಾಸ್ ಸಮೀರ್ ಎಂದು ಅಧಿಕಾರಿಗಳು ಹೇಳಿದ್ದಾರೆ. ವಿಷಯ ತಿಳಿದು ಭದ್ರತಾ ಪಡೆಗಳು 5 ಕಿಮೀ ದೂರದ ಉಗ್ರನ ಮನೆಯವರನ್ನು ಸಂಪರ್ಕಿಸಿ ಶರಣಾಗುವಂತೆ ಮನವೊಲಿಸಿ, ಆತನಿಗೆ ಯಾವುದೇ ಹಾನಿ ಮಾಡುವುದಿಲ್ಲ ಎಂದು ಭರವಸೆ ನೀಡಿದರು.

ಭದ್ರತಾ ಪಡೆಗಳ ಭರವಸೆಯ ನಂತರ ಮಗ ಅಡಗಿದ್ದ ಮನೆಯ ಬಳಿ ಬಂದ ತಾಯಿ, ಭದ್ರತಾ ಪಡೆಗಳಿಗೆ ಶರಣಾಗುವಂತೆ ಮನವೊಲಿಸಿದಳು. ತಾಯಿಯ ಮಾತಿಗೆ ಒಪ್ಪಿದ ಉಗ್ರ ಸಮೀರ್ ಅಧಿಕಾರಿಗಳ ಎದುರು ಶರಣಾಗಿದ್ದಾನರ. ತನ್ನ ಬಳಿ ಇದ್ದ ಒಂದು ರೇಡಿಯೋ, ಮೂರು ಗ್ರೆನೇಡ್, ಒಂದು ಎಕೆ ರೈಫಲ್ ಅಧಿಕಾರಿಗಳಿಗೆ ಒಪ್ಪಿಸಿದ್ದಾನೆ.

Click for More Interesting News

Loading...

Leave a Reply

Your email address will not be published.

error: Content is protected !!