ಲಷ್ಕರ್-ಇ-ತೊಯ್ಬಾ ಟಾಪ್ ಉಗ್ರನ ಹತ್ಯೆ ಮಾಡಿದ ಭದ್ರತಾ ಪಡೆಗಳು – News Mirchi

ಲಷ್ಕರ್-ಇ-ತೊಯ್ಬಾ ಟಾಪ್ ಉಗ್ರನ ಹತ್ಯೆ ಮಾಡಿದ ಭದ್ರತಾ ಪಡೆಗಳು

ಜಮ್ಮೂ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಬುಧವಾರ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಭೀಕರ ಕಾದಾಟ ನಡೆಯಿತು. ಈ ಎನ್ಕೌಂಟರ್ ನಲ್ಲಿ ಲಷ್ಕರ್-ಇ-ತೊಯ್ಬಾ ಭಯೋತ್ಪಾದಕ ಸಂಘಟನೆಯ ಟಾಪ್ ಕಮಾಂಡರ್ ಆಯುಬ್ ಲೆಲ್ಹಾರಿಯನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ. ಪುಲ್ವಾಮಾ ಜಿಲ್ಲೆಯಲ್ಲಿನ ಬಂದೆರ್ಪೊರಾದಲ್ಲಿನ ಕಾಕ್ಪೊರಾ ಗ್ರಾಮದಲ್ಲಿ ಈ ಎನ್ಕೌಂಟರ್ ನಡೆದಿದೆ. ಈ ಎನ್ಕೌಂಟರ್ ನಲ್ಲಿ ಯೋಧರೊಬ್ಬರಿಗೆ ಗಾಯಗಳಾಗಿವೆ.

ಮೋಸ್ಟ್ ವಾಂಟೆಡ್ ಟೆರರಿಸ್ಟ್ ಗಳಲ್ಲಿ ಆಯುಬ್ ಲೆಲ್ಹಾರಿ ಒಬ್ಬ. ಇದು ಭದ್ರತಾ ಪಡೆಗಳಿಗೆ ಸಿಕ್ಕ ಬಹುದೊಡ್ಡ ಜಯ ಎಂದು ಜಮ್ಮೂ ಕಾಶ್ಮೀರ ಡಿಜಿಪಿ ಹೇಳಿದ್ದಾರೆ. ಬುಧವಾರ ಸಂಜೆ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಹೋರಾಟ ಆರಂಭವಾದ ಕೆಲವೇ ನಿಮಿಷಗಳಲ್ಲಿ ಲೆಲ್ಹಾರಿ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾನೆ.

ಕೆಲ ದಿನಗಳ ಹಿಂದೆಯಷ್ಟೇ ಭದ್ರತಾ ಪಡೆಗಳು ಹಿಜ್ಬುಲ್ ಮುಜಾಹಿದೀನ್ ಮುಖ್ಯಸ್ಥ ಯಾಸೀನ್ ಯಾಟೂ ಅಲಿಯಾಸ್ ಮಹಮೂದ್ ಘಜ್ನವಿ ನನ್ನು ದಕ್ಷಿಣ ಕಾಶ್ಮೀರದ ಅವ್ನೀರಾ ಗ್ರಾಮದಲ್ಲಿ ಹತ್ಯೆ ಮಾಡಲಾಗಿತ್ತು. ಬುರ್ಹಾನ್ ವಾನಿ ನಂತರ ಹಿಜ್ಬುಲ್ ಮುಜಾಹಿದೀನ್ ಸಂಘಟನೆಗೆ ಯಾಸಿನ್ ಯಾಟೂ ಹತ್ಯೆ ದೊಡ್ಡ ಹೊಡೆತ ಎಂದು ಭಾವಿಸಲಾಗಿತ್ತು. ಇದೀಗ ಲೆಲ್ಹಾರಿ ಹತ್ಯೆ ಮೂಲಕ ಲಷ್ಕರ್ ಸಂಘಟನೆಗೆ ಭಾರೀ ಹೊಡೆತ ನೀಡಿದಂತಾಗಿದೆ.

Click for More Interesting News

Loading...
error: Content is protected !!