ಲೆಫ್ಟಿನೆಂಟ್ ಉಮರ್ ಫಯಾಜ್ ಹತ್ಯೆ ಮಾಡಿದ್ದ ಉಗ್ರನ ಕೊಂದ ಸೇನೆ – News Mirchi

ಲೆಫ್ಟಿನೆಂಟ್ ಉಮರ್ ಫಯಾಜ್ ಹತ್ಯೆ ಮಾಡಿದ್ದ ಉಗ್ರನ ಕೊಂದ ಸೇನೆ

ಲೆಫ್ಟಿನೆಂಟ್ ಉಮರ್ ಫಯಾಜ್ ಅವರನ್ನು ಅಪಹರಿಸಿ ಭೀಕರವಾಗಿ ಹತ್ಯೆ ಮಾಡಿದ್ದ ಉಗ್ರನನ್ನು ಭಾರತೀಯ ಸೇನೆ ನೆಲಕ್ಕುರುಳಿಸಿದೆ. ಶನಿವಾರ ಬೆಳಗ್ಗೆ ಕುಲ್ಗಾಂ ಜಿಲ್ಲೆಯಲ್ಲಿನ ತಂತ್ರಿಪುರ ಗ್ರಾಮ ಸಮೀಪ ನಡೆದ ಎನ್ಕೌಂಟರ್ ನಲ್ಲಿ ಲಷ್ಕರ್ ಉಗ್ರ ಇಷ್ಫಾಕ್ ಪದ್ದರ್ ನನ್ನು ಸೇನೆ ಹತ್ಯೆ ಮಾಡಿದೆ.

ಖಚಿತ ಮಾಹಿತಿ ಪಡೆದ 62ನೇ ರಾಷ್ಟ್ರೀಯ ರೈಫಲ್ಸ್, ಎಸ್ಒಜಿ ಸಿಬ್ಬಂದಿ ಕಣಕ್ಕಿಳಿದಿದ್ದರು. ಈ ವೇಳೆ ನಡೆದ ಎನ್ಕೌಂಟರ್ ನಲ್ಲಿ ಇಷ್ಫಾಕ್ ನನ್ನು ಕೊಂದು ಸೇಡು ತೀರಿಸಿಕೊಂಡಿದ್ದಾರೆ. ಇನ್ನು ಇಷ್ಫಾಕ್ ಸಹಚರರಿಗಾಗಿ ಹುಡುಕಾಟ ನಡೆದಿದೆ.

[ಇದನ್ನೂ ಓದಿ: ಮೂವರು ನೂತನ ಸಚಿವರು, ಗೃಹ ಖಾತೆ ರಾಮಲಿಂಗಾರೆಡ್ಡಿ ಹೆಗಲಿಗೆ]

ಇಷ್ಫಾಕ್ ನನ್ನು ಹತ್ಯೆ ಮಾಡುತ್ತಿದ್ದಂತೆ ಸ್ಥಳೀಯ ಪುಂಡರು ಸೇನೆಯ ವಿರುದ್ಧ ತಿರುಗಿ ಬಿದ್ದರು. ಸೇನೆಯ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟಕ್ಕೆ ಮುಂದಾದರು. ಹೀಗಾಗಿ ಸೇನೆ ಅಶ್ರುವಾಯು ಪ್ರಯೋಗ ಮಾಡಿತು.

ಮೇ 10 ರಂದು ಲೆಫ್ಟಿನೆಂಟ್ ಉಮರ್ ಫಯಾಜ್(22) ಅವರ ಮೃತದೇಹ ದಕ್ಷಿಣ ಕಾಶ್ಮೀರದ ಶೋಫಿಯಾನ್ ನಲ್ಲಿ ಕಂಡು ಬಂದಿತ್ತು. ಅವರ ಸಂಬಂಧಿಯ ವಿವಾಹಕ್ಕೆ ಹೋಗಲು ಬಾತ್ಪುರ ಗ್ರಾಮಕ್ಕೆ ಫಯಾಜ್ ತೆರಳಿದ್ದಾಗ, ಉಗ್ರರು ಅವರನ್ನು ಅಪಹರಿಸಿ ಕೆಲ ಗಂಟೆಗಳಲ್ಲಿ ಹತ್ಯೆ ಮಾಡಿದ್ದರು.

Loading...