ಮಲ್ಯ ಹಸ್ತಾಂತರ : ಲಂಡನ್ ನ್ಯಾಯಾಲಯದಲ್ಲಿ ಡಿಸೆಂಬರ್ 4 ರಿಂದ ವಿಚಾರಣೆ

ವಿಜಯಲ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕರಣದ ವಿಚಾರಣೆಯನ್ನು ಲಂಡನ್ ನ ನ್ಯಾಯಾಲಯ ಡಿಸೆಂಬರ್ 4 ರಿಂದ ಕೈಗೆತ್ತಿಕೊಳ್ಳಲಿದ್ದು, 8 ದಿನಗಳ ಕಾಲ ವಿಚಾರಣೆ ನಡೆಯಲಿದೆ.

ವೆಸ್ಟ್ ಮಿನ್ ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಹಾಜರಾಗಿದ್ದ ವಿಜಯ್ ಮಲ್ಯ, ತಮ್ಮ ವಿರುದ್ಧ ಭಾರತ ಸರ್ಕಾರ ಹೊರಿಸಿರುವ ಆರೋಪಗಳು ಆಧಾರ ರಹಿತ ಎಂದು ಹೇಳಿದ್ದರು. ಮಲ್ಯ ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ.

1992 ರಲ್ಲಿ ಮಾಡಿಕೊಂಡ ಹಸ್ತಾಂತರ ಒಪ್ಪಂದದ ಆಧಾರದಲ್ಲಿ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಫೆಬ್ರವರಿ 9 ರಂದು ಯುಕೆ ಸರ್ಕಾರಕ್ಕೆ ಮನವಿ ಮಾಡಿತ್ತು. ಭಾರತದಲ್ಲಿ 17 ಬ್ಯಾಂಕುಗಳಿಗೆ ಸುಮಾರು 9 ಸಾವಿರ ಕೋಟಿ ಸಾಲ ಬಾಕಿ ಉಳಿಸಿಕೊಂಡು, ದೇಶ ಬಿಟ್ಟು ಪರಾರಿಯಾಗಿದ್ದರು.

Get Latest updates on WhatsApp. Send ‘Add Me’ to 8550851559

Related News