ಶೂಟಿಂಗ್ ವೇಳೆ ಬಿದ್ದು ಯೋಗಿ, ಕೋಮಲ್ ಗೆ ಗಾಯ – News Mirchi

ಶೂಟಿಂಗ್ ವೇಳೆ ಬಿದ್ದು ಯೋಗಿ, ಕೋಮಲ್ ಗೆ ಗಾಯ

ಚಿತ್ರೀಕರಣ ವೇಳೆಯಲ್ಲಿ ಅವಘಡವೊಂದು ನಡೆದಿದ್ದು, ನಟ ಲೂಸ್ ಮಾದ ಯೋಗಿ ಮತ್ತು ಕೋಮಲ್ ಗಾಯಗೊಂಡಿರುವ ಘಟನೆ ನಡೆದಿದೆ. ಮಹಾಬಲಿಪುರಂ ನಲ್ಲಿ ಕೆಂಪೇಗೌಡ-2 ಚಿತ್ರದ ಸಾಹಸ ದೃಶ್ಯಗಳ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಬೈಕ್ ಚೇಸಿಂಗ್ ನಲ್ಲಿ ಕೆಳಗೆ ಬಿದ್ದು ಇಬ್ಬರೂ ನಟರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈಗ ಇಬ್ಬರೂ ನಟರು ಆರೋಗ್ಯದಿಂದ ಇದ್ದಾರೆ ಎಂದು ಚಿತ್ರತಂಡ ಹೇಳಿದೆ.

ಈ ಹಿಂದೆ ಕೆಂಪೇಗೌಡ ಸೂಪರ್ ಹಿಟ್ ಚಲನಚಿತ್ರವನ್ನು ನಿರ್ಮಿಸಿದ್ದ ಶಂಕರೇಗೌಡ ಅವರೇ ಕೆಂಪೇಗೌಡ ಚಿತ್ರದ ನಿರ್ಮಾಪಕರು ಹಾಗೂ ನಿರ್ದೇಶಕರಾಗಿದ್ದು, ಬೈಕ್ ಚೇಸಿಂಗ್ ದೃಶ್ಯ ಚಿತ್ರೀಕರಣಕ್ಕೂ ಮುನ್ನ ಹಲವು ನಟರಿಗೆ ಅಭ್ಯಾಸ ಮಾಡಿಸಲಾಗಿತ್ತು ಎನ್ನಲಾಗಿದೆ. ಆದರೆ ಚಿತ್ರೀಕರಣದಲ್ಲಿ ಈ ಅನಾಹುತ ಸಂಭವಿಸಿದೆ.

Loading...